(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.15. ಸದಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಶಕ್ತಿ ಕಡೇಶಿವಾಲಯ(ರಿ) ನಿರ್ಮಾಣದ ಬಹುನಿರೀಕ್ಷಿತ ದೇಶಭಕ್ತಿ ಗೀತೆ ‘ಜಯತು ಜನ್ಮಭೂಮಿ’ ಇಂದು ಯುವಶಕ್ತಿ ಕಡೇಶಿವಾಲಯ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.
ಶೆಟ್ಟಿ ಅಜಯ್ ರಾಜ್ ಸಾಹಿತ್ಯದಲ್ಲಿ ಸಂತೋಷ್ ಬೇಂಕ್ಯ ಗಾಯನದಲ್ಲಿ ಮೂಡಿಬಂದ ಹಾಡಿಗೆ ಅಶ್ವಿನ್ ಪುತ್ತೂರು ಸಂಗೀತ ನೀಡಿದ್ದು, ಇದೀಗ ಎಲ್ಲೆಡೆ ಸದ್ದುಮಾಡುತ್ತಿದೆ.
ಇಂದು ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುನಿಲ್ ಕುಮಾರ್ ಹಾಡಿಗೆ ಅಧಿಕೃತ ಚಾಲನೆ ನೀಡಿದರು. ಅತ್ಯುತ್ತಮ ಶಿಕ್ಷಕ ಪುರಸ್ಕೃತ, ಯುವಶಕ್ತಿಗಳ ಸ್ಪೂರ್ತಿ ಭಾಸ್ಕರ್ ನಾಯ್ಕ್ ಪುಣಚ ಶುಭಹಾರೈಸಿದರು. ಪಂಚಾಯತ್ ಅಧಕ್ಷರಾದ ಸುರೇಶ್ ಬನಾರಿ, ಅರ್ಚಕರಾದ ದಿನೇಶ್ ಭಟ್, ಸಂಘಟನಾ ಪ್ರಮುಖರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಈ ಕೆಳಗಿನ ಲಿಂಕ್ ತೆರೆದು ಈ ದೇಶಭಕ್ತಿ ಗೀತೆಯನ್ನು ಕೇಳಿ ನೋಡಿ ಆನಂದಿಸಬಹುದು.
https://youtu.be/5EgJtJFwm4g