ಇಸ್ಲಾಂ ಧರ್ಮದ ಅವಹೇಳನ ಪ್ರಕರಣ ► ಆರೋಪಿ ಪ್ರದೀಪ್ ನಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಕಡಬ, ಅ.30. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕಡಬದ ಮೊಬೈಲ್ ಸೆಂಟರ್‌ ಒಂದರ ನೌಕರ ಪ್ರದೀಪ್ ಎಂಬವರಿಗೆ ಸೋಮವಾರದಂದು ಜಾಮೀನು ದೊರೆತಿದೆ.

ಪ್ರದರ್ಶನ ವಾಟ್ಸಾಪ್ ಮೂಲಕ ಯಾರಿಗೂ ಫೋಟೋವನ್ನು ವರ್ಗಾಯಿಸಿಲ್ಲ, ಕೋಮು ಸೌಹಾರ್ದತೆ ಮತ್ತು ಕೋಮು ಸಮನ್ವಯದ ದೃಷ್ಟಿಯಿಂದ ಬೇರೆ ಬೇರೆ ಧರ್ಮದ ದೇವರು ಅಥವಾ ಚಿಹ್ನೆಗಳನ್ನು ಒಂದುಗೂಡಿಸಿ ಪ್ರದರ್ಶಿಸುವುದು ಹೊಸತಲ್ಲ, ಪ್ರಕರಣದಲ್ಲಿ ಯಾವುದೇ ಧರ್ಮವನ್ನು ನಿಂದಿಸಿಲ್ಲ, ಆರೋಪಿಯು ಕಾನೂನಿಗೆ ಗೌರವ ಕೊಟ್ಟು ತಾನಾಗಿಯೇ ಠಾಣೆಗೆ ಹಾಜರಾಗಿದ್ದಾನೆ ಮುಂತಾದ ವಿಚಾರಗಳನ್ನು ಎತ್ತಿಕೊಂಡು ಪ್ರದೀಪನ ಪರ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದರು. ಅದರಂತೆ ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ. ಈತನ ಪರವಾಗಿ ಪ್ರಸಿದ್ಧ ವಕೀಲರಾದ ಮಹೇಶ್ ಕಜೆ ವಾದಿಸಿದ್ದರು.

error: Content is protected !!

Join the Group

Join WhatsApp Group