ಬೆಳ್ಳಾರೆ: ಹಂದಿಗೆಂದು ಇಟ್ಟಿದ್ದ ಉರುಳಿಗೆ ಬಿದ್ದ ಚಿರತೆ ➤ ಯಶಸ್ವಿ ಕಾರ್ಯಾಚರಣೆಯಲ್ಲಿ ಚಿರತೆ ಸೆರೆ

(ನ್ಯೂಸ್ ಕಡಬ) newskadaba.com ಸವಣೂರು, ಆ.12. ಹಂದಿಗೆಂದು ಇಟ್ಟ ಉರುಳಿಗೆ ಚಿರತೆಯೊಂದು ಬಿದ್ದ ಘಟನೆ ಬೆಳ್ಳಾರೆ ಸಮೀಪ ಬುಧವಾರದಂದು ನಡೆದಿದೆ.

ಪೆರುವಾಜೆ ಗ್ರಾಮದ ಕಾನಾವು ಸಮೀಪದ ಪೆರುವಾಜೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಯಾರೋ ಅಪರಿಚಿತರು ಹಂದಿಗೆಂದು ಉರುಳು ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿತ್ತು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಅರಿವಳಿಕೆ ತಜ್ಞರನ್ನು ಕರೆಸಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಆ ಬಳಿಕ ಬೋನಿಗೆ ಹಾಕಿ ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಗಿದೆ. ಕಾರ್ಯಾಚರಣೆಯ ವೇಳೆ ಪುತ್ತೂರು ಹಾಗೂ ಸುಳ್ಯ ಉಪವಿಭಾಗದ ಅರಣ್ಯಧಿಕಾರಿಗಳು ಸ್ಥಳದಲ್ಲಿದ್ದರು.

 

 

 

Scroll to Top