ಮರ್ಧಾಳ: ಕಮರಿಗೆ ಉರುಳಿದ ಟಾಟಾ ಏಸ್ ಗೂಡ್ಸ್ ವಾಹನ ➤ ಚಾಲಕನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.09. ಟಾಟಾ ಏಸ್ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಪರಿಣಾಮ ವಾಹನ ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಸೋಮವಾರದಂದು ಸಂಭವಿಸಿದೆ.

ಸುಂಕದಕಟ್ಟೆಯಿಂದ ಮರ್ಧಾಳ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಕಲ್ಲಾಜೆ ಸಮೀಪ ರಸ್ತೆ ಬದಿಯ ಕಮರಿಗೆ ಉರುಳಿದೆ. ಘಟನೆಯಲ್ಲಿ ವಾಹನ ಚಾಲಕ, ಮರ್ಧಾಳದ ಗಣೇಶ್ ವೆಲ್ಡಿಂಗ್ ವರ್ಕ್ಸ್ ಮಾಲಕ ಮಂಡೆಕರ ನಿವಾಸಿ ರಾಮಚಂದ್ರ ಎಂಬವರ ಕಾಲು ಮುರಿದಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

 

Scroll to Top