ಕುಕ್ಕೇ ಸುಬ್ರಹ್ಮಣ್ಯ: ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಸೀಳಿ ಕೊಂದ ಚಿರತೆ ➤ ಸ್ಥಳೀಯರಲ್ಲಿ ಆತಂಕ



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.01. ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನದ ಕರುವಿನ ಮೇಲೆ ದಾಳಿ ಮಾಡಿದ ಚಿರತೆಯೊಂದು ಕರುವನ್ನು ತಿಂದ ಘಟನೆ ಭಾನುವಾರ ಬೆಳಿಗ್ಗೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.





ಸುಬ್ರಹ್ಮಣ್ಯ ಸಮೀಪದ ಕಲ್ಮಕಾರು ಗ್ರಾಮದ ಮಾಡಬಾಕಿಲು ನಿವಾಸಿ ಲಾವಣ್ಯ ಮಹೇಶ್ ಎಂಬವರ ಹಟ್ಟಿಯಲ್ಲಿ ದನ ಕರುಗಳನ್ನು ಕಟ್ಟಿ ಹಾಕಲಾಗಿತ್ತು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಹಟ್ಟಿಗೆ ತೆರಳಿದಾಗ ಕರುವನ್ನು ಸೀಳಿ ಅರ್ಧ ತಿಂದಿರುವುದು ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಚಿರತೆ ಇರುವ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, ಚಿರತೆಯೇ ಕರುವನ್ನು ತಿಂದಿರುವುದಾಗಿ ಶಂಕಿಸಲಾಗಿದೆ. ಇದೀಗ ಪರಿಸರದ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.






 

 

 

 

error: Content is protected !!
Scroll to Top