9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ➤ ಪೊಲೀಸರಿಂದ ಲುಕ್ಔಟ್ ನೋಟೀಸ್

(ನ್ಯೂಸ್ ಕಡಬ) newskadaba.com ಉಡುಪಿ, ಜು.25. ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ 9ನೇ ತರಗತಿ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ಪೆರಂಪಳ್ಳಿ ನಿವಾಸಿ ಅವೀನಾ (16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.

2021ರ ಏಪ್ರಿಲ್ 13 ರಂದು ಪೆರಂಪಲ್ಲಿಯಲ್ಲಿರುವ ತನ್ನ ಮನೆಯಿಂದ ಅವೀನಾ ಕಾಣೆಯಾಗಿದ್ದಳು. ಒಂಬತ್ತನೆಯ ತರಗತಿ ಓದುತ್ತಿದ್ದ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಅವೀನಾ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಾಲಕಿಯ ಬಗ್ಗೆ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Also Read  ಕೊನೆಗೂ ಬಿತ್ತು ಕಲ್ಲುಗುಡ್ಡೆ ಮದ್ಯದಂಗಡಿಗೆ ಬೀಗ ► ನಾಲ್ಕು ದಿನಗಳ ಅನಿರ್ದಿಷ್ಟಾವಧಿ ಮುಷ್ಕರ ತಾತ್ಕಾಲಿಕ ಅಂತ್ಯ

 

 

 

error: Content is protected !!
Scroll to Top