ಹಾರಿ ಬಂದು ದ್ವಿಚಕ್ರ ವಾಹನಕ್ಕೆ ಹೊಡೆದ ನವಿಲು ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಜು.20. ನವಿಲಿಗೆ ಢಿಕ್ಕಿ ಹೊಡೆದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೆಂಕ ಎರ್ಮಾಳು ಗರೋಡಿ‌ ಬಳಿ ಸೋಮವಾರದಿಂದ ರಾತ್ರಿ ನಡೆದಿದೆ.

ಮೃತ ಸವಾರನನ್ನು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಬೆಳಪು ಪ್ರಸಾದ್ ನಗರ ನಿವಾಸಿ ಅಬ್ದುಲ್ಲಾ(25) ಎಂದರೆ ಗುರುತಿಸಲಾಗಿದೆ. ಪಡುಬಿದ್ರಿಯ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ತನ್ನ ಟಿವಿಎಸ್ ಎನ್ ಟಾರ್ಕ್ ವಾಹನದಲ್ಲಿ ಉಚ್ಚಿಲ ಕಡೆಗೆ ತೆರಳುತ್ತಿದ್ದ ವೇಳೆ ನವಿಲು ಹಾರಿಕೊಂಡು ಬಂದು ಢಿಕ್ಕಿಯಾಗಿದೆ ಎನ್ನಲಾಗಿದೆ. ನವಿಲು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಅಬ್ದುಲ್ಲಾರನ್ನು ಸ್ಥಳೀಯ ಕಾರ್ತಿಕ್ ಎಂಬವರು ತನ್ನ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ‌ ಎಂದು ತಿಳಿದುಬಂದಿದೆ.

 

 

 

Scroll to Top