ಕಡಬ ಪರಿಸರದಲ್ಲಿ ಕಳ್ಳರ ಓಡಾಟ..‼️ ➤ ಈ ಬಗ್ಗೆ ಕಡಬ ಎಸ್ಐ ಹೇಳಿದ್ದೇನು ಗೊತ್ತೇ..⁉️

(ನ್ಯೂಸ್ ಕಡಬ) newskadaba.com ಕಡಬ, ಜು.08. ಇತ್ತೀಚೆಗೆ ಕಟ್ಟತ್ತಾರು, ಮಾಡಾವು ಪರಿಸರದಲ್ಲಿ ನಡೆದ ಸರಣಿ ದರೋಡೆಯ ಕಳ್ಳರ ಗ್ಯಾಂಗ್ ಕಡಬ ಪರಿಸರದಲ್ಲಿ ಬೀಡುಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಕಡಬ ಎಸ್ಐ ರುಕ್ಮನಾಯ್ಕ್ ಎಚ್ಚರಿಸಿದ್ದಾರೆ.

ಮನೆಯ ಬಾಗಿಲು ಮುರಿದು ಒಳನುಗ್ಗುವ ಕಳ್ಳರು ಸಲೀಸಾಗಿ ಕಳ್ಳತನ ನಡೆಸುತ್ತಿದ್ದಾರೆ. ಕಡಬ ಆಸುಪಾಸಿನ ಪ್ರತಿಯೋರ್ವರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿರುವ ಅವರು, ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಥವಾ ಕಳ್ಳತನದ ಮಾಹಿತಿ ಸಿಕ್ಕಿದ್ದಲ್ಲಿ ತಕ್ಷಣವೇ ಕಡಬ ಪೋಲೀಸ್ ಠಾಣೆ 9480805364 ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ವಿನಂತಿಸಿದ್ದಾರೆ.

Also Read  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ  ಪ್ರಜ್ವಲ್ ರೇವಣ್ಣ ವಿರುದ್ಧ 3ನೇ ಚಾರ್ಜ್​ಶೀಟ್ ಸಲ್ಲಿಕೆ

 

 

 

error: Content is protected !!
Scroll to Top