ರಾಜ್ಯದಲ್ಲಿ ಇನ್ಮುಂದೆ ಮರಳು ಬ್ಯಾಗ್ ಗಳಲ್ಲಿ ಲಭ್ಯ ➤ ಕಡಿಮೆ ದರ ಹಾಗೂ ಕೆಲವರಿಗೆ ಉಚಿತ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜು. 01. ರಾಜ್ಯದಲ್ಲು ಇನ್ನು ಮುಂದೆ ಸಿಮೆಂಟ್ ಬ್ಯಾಗ್ ರೀತಿಯಲ್ಲಿ ಮರಳು ಕೂಡಾ ಬ್ಯಾಗ್ ಗಳಲ್ಲಿ ಸಿಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಮರಳು ಸಮಸ್ಯೆ ನಿವಾರಣೆಗೆ ಬ್ಯಾಗ್ ಗಳಲ್ಲಿ 50 ಕೆಜಿ ಮರಳು ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಮನೆ ಹಾಗೂ ಕಟ್ಟಡ ನಿರ್ಮಿಸುವವರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುವಂತೆ ಮಾಡಲು ಯೋಜನೆ ಜಾರಿಗೆ ತರಲಾಗುತ್ತಿದೆ. ಒಂದೊಂದು ಬ್ಯಾಗ್ ನಲ್ಲಿ 50 ಕೆಜಿ ಮರಳು ಮಾರಾಟ ಮಾಡಲಾಗುವುದು. ಅದಕ್ಕಿಂತ ಹೆಚ್ಚಿನ ಪ್ರಮಾಣದ ಮರಳನ್ನು ಬೇಕಾದರೂ ಖರೀದಿಸಬಹುದಾಗಿದೆ ಎಂದು ಹೇಳಿದ್ದಾರೆ. ಪ್ರಾಯೋಗಿಕವಾಗಿ ರಾಜ್ಯದ ಐದು ಸ್ಥಳಗಳಲ್ಲಿ ಮರಳು ಮಾರಾಟ ಘಟಕಗಳನ್ನು ಸ್ಥಾಪಿಸಲಾಗುವುದು ಅಲ್ಲದೇ, 5 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಮನೆ ನಿರ್ಮಿಸುವವರಿಗೆ ರಾಜಧನ ಇರವುದಿಲ್ಲ. ಬಡತನ ರೇಖೆಗಿಂತ ಕೆಳಗಿನವರು, ಬಡವರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆಶ್ರಯ ಮನೆ ನಿರ್ಮಿಸುವವರಿಗೆ ಉಚಿತವಾಗಿ ಮರಳು ನೀಡಲಾಗುವುದು ಎಂದೂ ಹೇಳಿದ್ದಾರೆ.

Also Read  SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

error: Content is protected !!
Scroll to Top