ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಯುರೋಪ್ ದೇಶಗಳಿಗೆ ಅವಕಾಶವಿಲ್ಲ…

(ನ್ಯೂಸ್ ಕಡಬ) Newskadaba.com ಜು. 01. ಕೊರೋನಾ ಕಾರಣದಿಂದಾಗಿ ಯುರೋಪಿಯನ್ ದೇಶಗಳು ಕಳೆದ ಕೆಲವು ತಿಂಗಳುಗಳಿಂದ ವಿಮಾಯಾನವನ್ನು ಸ್ಥಗಿತಗೊಳಿಸಿದ್ದು, ಇತ್ತೀಚೆಗೆ ಪುನಃ ವಿಮಾನಯಾನ ಆರಂಭವಾಗಿದ್ದರೂ ಕೂಡಾ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಅದರಲ್ಲೂ ಏಷ್ಯಾದಿಂದ ಯಾರೇ ಪ್ರಯಾಣಿಕರು ಯೂರೋಪ್ ಗೆ ತೆರಳಬೇಕೆಂದರೆ ಕಡ್ಡಾಯವಾಗಿ ಲಸಿಕೆ ಪಡೆಯಲು ಸೂಚಿಸಿದೆ.

ಆದರೆ ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಭಾರತದ ಪ್ರಯಾಣಿಕರಿಗೆ ವೀಸಾ ನೀಡುವುದನ್ನು ಯೂರೋಪ್ ಒಕ್ಕೂಟ ನಿಷೇಧಿಸಿದೆ. ಇದೀಗ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group