ಬೆಳ್ತಂಗಡಿ, ಅ.29.ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಳೆಂಜ ಎಂಬಲ್ಲಿ ಭಾನುವಾರದಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಧರ್ಮಸ್ಥಳ ಸಮೀಪದ ಕಳೆಂಜ ನಿವಾಸಿ ಉಮೇಶ್ ಗೌಡ ಎಂಬವರ ಪತ್ನಿ ವಿಜಯಲಕ್ಷ್ಮೀ(27) ಮಕ್ಕಳಾದ ದೀಕ್ಷಿತ್(5) ಹಾಗೂ ಆರು ತಿಂಗಳ ಮಗು ಎಂದು ಗುರುತಿಸಲಾಗಿದೆ. ಕೇರಳದಲ್ಲಿ ಉದ್ಯೋಗಿಯಾಗಿರುವ ಉಮೇಶ್ ಗೌಡ ಅವರು ಇತ್ತೀಚೆಗೆ ಊರಿಗೆ ಆಗಮಿಸಿದ್ದವರು ಮೂರು ದಿನಗಳ ಹಿಂದೆಯಷ್ಟೇ ಊರಿಂದ ತೆರಳಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.