ದೇವಾಲಯದ ಅರ್ಚಕರಿಗೆ ಚಪ್ಪಲಿಯಿಂದ ಹೊಡೆತ ➤ ಆರು ಮಂದಿಯ ವಿರುದ್ದ ಕೇಸ್ ದಾಖಲು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 27. ಅರ್ಚಕ ಹಾಗೂ ಅಚರ್ಕನ ಪುತ್ರನೋರ್ವನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಎಂಬಲ್ಲಿ ನಡೆದಿದೆ. ಇದೀಗ ಅರ್ಚಕರ ಮೇಲಿನ ಹಲ್ಲೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದವರನ್ನು ದೇವಾಲಯದ ಅರ್ಚಕ ಚನ್ನಕೇಶವಯ್ಯ ಹಾಗೂ ಪುತ್ರ ರಂಗನಾಥ್ ಎಂದು ಗುರುತಿಸಲಾಗಿದೆ. ಜಾಗದ ವಿಚಾರವಾಗಿ ನಡೆದ ಜಗಳವು ತಾರಕಕ್ಕೇರಿ ಗವಿ ರಂಗನಾಥಸ್ವಾಮಿ ದೇವಾಲಯದ ಎದುರೇ ದೇವಾಲಯದ ಅರ್ಚಕ ಹಾಗೂ ಅವರ ಪುತ್ರನ ಮೇಲೆ ಗುಂಪೊಂದು ಚಪ್ಪಲಿಯಲ್ಲಿ ಹೊಡೆದು ಹಲ್ಲೆ ನಡೆಸಿದೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

Also Read  ಕಟೀಲು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ➤ ಅಪಾಯದಿಂದ ಪಾರಾದ ಕುಟುಂಬ

error: Content is protected !!
Scroll to Top