ಮಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಕೆಎಸ್ಸಾರ್ಟಿಸಿಯಿಂದ ಹಣ ಲೂಟಿ ➤ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕೆಎಸ್ಸಾರ್ಟಿಸಿ- ಪ್ರಯಾಣಿಕರ ಅಳಲು

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 25. ಕೊರೋನಾ ಲಾಕ್ ಡೌನ್ ಬಳಿಕ ಜಿಲ್ಲಾದ್ಯಂತ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಗೊಂಡಿರುವ ಬೆನ್ನಲ್ಲೇ ಕೆಎಸ್ಸಾರ್ಟಿಸಿಯು ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.


ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಡುವೆ ಪೈಪೋಟಿ ನಡೆಯುತ್ತಿದ್ದು, ಈ ಹಿಂದೆ ಬೀರಿಯಿಂದ ತಲಪಾಡಿಗೆ ಖಾಸಗಿ ಬಸ್ ಟಿಕೆಟ್ ದರ 14 ರೂಪಾಯಿ ಪಡೆದರೆ, ಇದಕ್ಕೆ ಪೈಪೋಟಿ ನೀಡುತ್ತಿದ್ದ KSRTC ಬಸ್ 10 ರೂಪಾಯಿ ಪಡೆಯುತ್ತಿತ್ತು. ಇತ್ತೀಚೆಗೆ ಕೊರೋನಾ ಲಾಕ್‌ಡೌನ್ ನಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿದ್ದು, ಖಾಸಗಿ ಬಸ್ ಇಲ್ಲದ ಹಿನ್ನೆಲೆ KSRTC ಬಸ್ ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

Also Read  ಕಡಬ: ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯಾಗಿ ಗಣೇಶ್ ಪಿ. ಕರ್ತವ್ಯಕ್ಕೆ ಹಾಜರು

error: Content is protected !!
Scroll to Top