ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ತನ್ನ ವಿಶೇಷ ಕಾರ್ಯಾಚರಣೆಯಿಂದ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಕರಾಟೆ ಕಿಂಗ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ರವರು ಇದೀಗ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಮೇಯರ್ ರವರು ಬಡಪಾಯಿ ಕುಟುಂಬವೊಂದಕ್ಕೆ ತನ್ನ ಕರಾಟೆಯ ಪೌರುಷವನ್ನು ತೋರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶ, ಟೀಕೆಗೆ ಗುರಿಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರ ಕುಟುಂಬ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ದೀಪಾವಳಿ ಹಬ್ಬದಂದು ಮೇಯರ್ ಮನೆಯಲ್ಲಿ ಆಕೆಯ ಮಕ್ಕಳು ಪಟಾಕಿ ಹಚ್ಚುತ್ತಿದ್ದರು. ಆ ಸಮಯದಲ್ಲಿ ಅಪಾರ್ಟ್‌ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ನ ಮಕ್ಕಳು, ಮೇಯರ್ ಕವಿತಾ ಸನಿಲ್ ಅವರ ಮಕ್ಕಳು ಪಟಾಕಿ ಹಚ್ಚುವ ಸ್ಥಳದ ಹತ್ತಿರಕ್ಕೆ ಹೋಗಿದ್ದು, ಆಗ ಮೇಯರ್ ಕವಿತಾ ಸನಿಲ್ ಅವರ ಮಗಳು ವಾಚ್ ಮ್ಯಾನ್‌ನ ಸಣ್ಣ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸೆಕ್ಯುರಿಟಿ ಗಾರ್ಡ್ ಹೆಂಡತಿ ಆ ನಂತರ ಸುಮ್ಮನಾಗಿದ್ದಾರೆ.

Also Read  ಚುನಾವಣಾಧಿಕಾರಿಗೆ ಕಪಾಳಮೋಕ್ಷ : ಅಭ್ಯರ್ಥಿ ಅರೆಸ್ಟ್‌

ಈ ಸಮಯದಲ್ಲಿ ಮೇಯರ್ ಕವಿತಾ ಸನಿಲ್ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ ಕವಿತಾ ಸನಿಲ್ ಗುರುವಾರ ಮನೆಗೆ ಬಂದಿದ್ದು, ಬಂದ ತಕ್ಷಣವೇ ತನ್ನ ಮಕ್ಕಳ ಮಾತು ಕೇಳಿ ವಾಚ್ ಮ್ಯಾನ್ ಇರುವ ಸ್ಥಳಕ್ಕೆ ತೆರಳಿ, ಅಲ್ಲೇ ಇದ್ದ ಸಣ್ಣ ಮಗುವನ್ನು ಎಳೆದು ಅಷ್ಟು ದೂರಕ್ಕೆ ಬಿಸಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಗುವಿನ ರಕ್ಷಣೆಗೆ ಬಂದಿದ್ದ ವಾಚ್ ಮ್ಯಾನ್ ಪತ್ನಿಗೂ ಮನ ಬಂದಂತೆ ಹೊಲಸು ಮಾತುಗಳನ್ನು ಹಾಡಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೂರಿಕೊಂಡಿರುವ ವಾಚ್ ಮೆನ್ ಹೆಂಡತಿ ಇದೀಗ ಪೊಲೀಸ್ ದೂರು ನೀಡಿದ್ದಾರೆ.

error: Content is protected !!
Scroll to Top