ಉಪ್ಪಿನಂಗಡಿ: ಕೆಲಸಕ್ಕೆ ತೆರಳಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜೂ.22.: ಅನ್ಯ ಮನೆಯ ಕೆಲಸಕ್ಕೆಂದು  ಹೋಗಿದ್ದ ಮಹಿಳೆಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ಕರಾಯ ಗ್ರಾಮದ ಪಿಲಿಗೂಡು ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕಕ್ಕೆಪದವು ಉಳಿ  ಗ್ರಾಮದ ನಿವಾಸಿ ದೇವಕಿ (೬೨) ಎಂದು  ತಿಳಿಯಲಾಗಿದೆ. ಈಕೆ  ರಾಮಕೃಷ್ಣ ಕರ್ಕೇರ  ಎಂಬವರ ಮನೆ ಕೆಲಸಕ್ಕೆಂದು  ಬಂದಿದ್ದ ವೇಳೆ ಕುಸಿದು ಬಿದ್ದು  ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು  ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಅಲ್ಲಿ ಅವರು ಮೃತಪಟ್ಟರೆಂದು ತಿಳಿಸಲಾಯಿತು.

Also Read  ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆಯಿಂದ ➤ ವಿಕಲಚೇತನರ ಅಹವಾಲು ಸ್ವೀಕಾರ

ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ  ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.

 

 

 

error: Content is protected !!
Scroll to Top