(ನ್ಯೂಸ್ ಕಡಬ) newskadaba com ಬೆಂಗಳೂರು, ಜೂ.04. ಸೆಕ್ಸ್ ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ನ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದ್ದು, ಸದ್ಯಕ್ಕೆ ಸಚಿವ ಸಂಪುಟಕ್ಕೆ ಸೇರಲು ತೆರೆಮರೆಯಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.
ಸಚಿವ ಸಂಪುಟ ಪುನರ್ ರಚನೆ ಪ್ರಕ್ರಿಯೆಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದರಲ್ಲದೆ ಈ ಬಗ್ಗೆ ತೆರೆಮರೆಯ ಕಸರತ್ತು ನಡೆದಿತ್ತು. ಆದರೆ ಇದೀಗ ಸೆಕ್ಸ್ ಸಿಡಿ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಪ್ರಕ್ರಿಯೆಯನ್ನು ಎಸ್ಐಟಿಯು ಮುಂದೂಡಿದ್ದು, ಈ ಮೂಲಕ ಜಾರಕಿಹೊಳಿಯ ಸಂಪುಟ ಸೇರ್ಪಡೆಗೆ ಸೆಕ್ಸ್ ಸಿಡಿ ಕಂಟಕವಾಗಿದೆ. ಈಗಾಗಲೇ ಪ್ರಕರಣದ ವರದಿಯನ್ನು ಹೈಕೋರ್ಟ್ ಗೆ ನೀಡಲಾಗಿದ್ದು ಮುಂದಿನ ವಾರದಲ್ಲಿ ಸ್ಟೇಟಸ್ ರಿಪೋರ್ಟನ್ನು ಎಸ್ಐಟಿ ಹೈಕೋರ್ಟ್ ಗೆ ಸಲ್ಲಿಸಲಿದೆ.
Also Read ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಮತ್ತು ಕಾರು ನಡುವೆ ಢಿಕ್ಕಿಯಾಗಿ ಬಸ್ ಪಲ್ಟಿ ➤ ಹಲವು ಮಕ್ಕಳಿಗೆ ಗಾಯ