ಮೂರನೇ ಅಲೆಗೆ ಸಿದ್ಧತೆ ➤ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.01:ಕೊರೋನಾ ಸೋಂಕಿನ ಮೊದಲನೇ ಅಲೆಗಿಂತ ಎರಡನೇ ಅಲೆ ಭಿನ್ನವಾಗಿತ್ತು. 2ನೇ ಅಲೆಗಿಂತ 3ನೇ ಅಲೆ ವಿಭಿನ್ನವಾಗಿರುತ್ತದೆ. ಈಗಾಗಲೇ ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ.

 

ಈ ಸಂಬಂಧ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆಕ್ಸಿಜನ್​ ಸಮಸ್ಯೆ ಉದ್ಭವಿಸದಂತೆ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಪ್ರತಿ ಪ್ರಾಥಮಿಕ ಕೇಂದ್ರಗಳಲ್ಲಿ ಬೆಡ್​ಗಳ ಹೆಚ್ಚಳ ಮಾಡಿದ್ದು, ಆಸ್ಪತ್ರೆಗಳಲ್ಲಿ 60 ರಿಂದ 80 ಬೆಡ್​ಗೆ ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಇನ್ನು ಮೂರನೇ ಅಲೆಯಲ್ಲಿ ಸೋಂಕು ಮಕ್ಕಳಿಗೆ ಹೆಚ್ಚು ಕಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಚಿಕಿತ್ಸೆ ಕೊಡಲು ವೈದ್ಯರಿಗೆ ತರಬೇತಿ ನೀಡಿದ್ದೇವೆ ಎಂದರು.

 

 

 

error: Content is protected !!

Join the Group

Join WhatsApp Group