ನೆಲ್ಯಾಡಿ: ವಿದ್ಯುತ್ ಆಘಾತಕ್ಕೆ ತಾಯಿ – ಮಗು ಮೃತ್ಯು ➤ ಪಂಪ್ ಆನ್ ಮಾಡಲು ತೆರಳಿದ ವೇಳೆ ದುರ್ಘಟನೆ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.30. ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರದಂದು ನೆಲ್ಯಾಡಿ ಸಮೀಪದ ಪಟ್ರಮೆ ಎಂಬಲ್ಲಿ ನಡೆದಿದೆ.





ಮೃತರನ್ನು ಪಟ್ರಮೆಯ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ(30) ಹಾಗೂ ನಾಲ್ಕೂವರೆ ವರ್ಷದ ಪುತ್ರ ಭವೀಷ್ ಎಂದು ಗುರುತಿಸಲಾಗಿದೆ. ಭಾನುವಾರದಂದು ಗೀತಾರವರು ತನ್ನ ಮಗುವನ್ನು ಹಿಡಿದುಕೊಂಡು ಪಂಪ್ ಸ್ವಿಚ್ ಹಾಕಲು ತೆರಳಿದ್ದ ವೇಳೆ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.






 

 

 

error: Content is protected !!
Scroll to Top