(ನ್ಯೂಸ್ ಕಡಬ) Newskadaba.com ಮಲ್ಕಿ, ಮೇ. 26. ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರವಾಗಿ ಸಂದೇಶವನ್ನು ಹಾಕಿದ್ದ ಎಂಬ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿದ್ದಲ್ಲದೇ ಬೇಕರಿ ಮಾಲೀಕನಿಗೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಕಾರ್ನಾಡಿನಲ್ಲಿ ಐಶಾನಿ ಎಂಬ ಹೆಸರಿನ ಬೇಕರಿ ನಡೆಸುತ್ತಿರುವ ಕುಂದಾಪುರ ಮೂಲದ ಸುರತ್ಕಲ್ ನಿವಾಸಿ ಯುವಕ ಫೇಸ್‌ಬುಕ್ ಖಾತೆಯಲ್ಲಿ, ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲೆಸ್ತೀನ್ ಉಗ್ರರ ವಿರುದ್ಧ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು. ಈ ಕುರಿತು ಆಕ್ರೋಶಗೊಂಡ ಯುವಕರು ಬೇಕರಿಗೆ ನುಗ್ಗಿ ಬೆದರಿಕೆ ಹಾಕಿದ್ದಲ್ಲದೆ, ಯುವಕನಿಂದ ಕ್ಷಮೆ ಕೇಳಿಸಿ ವಿಡಿಯೋ ಮಾಡಿಸಿದ್ದರು. ಬಳಿಕ ಸ್ಥಳೀಯ ಹಿಂದೂ ಸಂಘಟನೆಯ ಪ್ರಮುಖರು ಬೇಕರಿಗೆ ತೆರಳಿ ಘಟನೆಯ ಕುರಿತ ಮಾಹಿತಿಯನ್ನು ಪಡೆದು ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಪಣಂಬೂರು ಡಿಸಿಪಿ ಮುಂದೆ ಹಾಜರುಪಡಿಸಿ, ತನಿಖೆಯ ನಂತರ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಲಾಗಿದೆ.