(ನ್ಯೂಸ್ ಕಡಬ) Newskadaba.com ಮಂಜೇಶ್ವರ, ಮೇ. 25. ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಬದಿಯಡ್ಕ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ನಿನ್ನೆ ರಾತ್ರಿ ಬದಿಯಡ್ಕ ಸಮೀಪದ ಕನ್ಯಾನ ಮೂಲದ ರಝಾಕ್(23) ಎಂದು ಗುರುತಿಸಲಾಗಿದೆ. ಪಿಲಾಂಕಟೈ ಎಂಬಲ್ಲಿ ಸೋಮವಾರ ರಾತ್ರಿ ವೇಳೆ ಈ ಅಪಘಾತ ಸಂಭವಿಸಿದ್ದು, ಮತ್ತೊಂದು ಬೈಕಿನಲ್ಲಿ ಸಂಚರಿಸುತ್ತಿದ್ದ ಕುಂಬ್ಡಾಜೆಯ ಸಂಜೀವ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.