ಬೆಳ್ಳಾರೆಯಲ್ಲಿ ಕೊರೋನಾ ಸ್ಫೋಟ..‼️ ➤ ಸುಳ್ಳು ಸುದ್ದಿ ರವಾನಿಸಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.20. ಬೆಳ್ಳಾರೆಯಲ್ಲಿ ಕೊರೋನಾ ಸ್ಪೋಟ, ಬೆಳ್ಳಾರೆಯ ಕಾವಿನಮೂಲೆ ಮೋರಿಯಲ್ಲಿ ಕುಳಿತುಕೊಳ್ಳುವ ಹುಡುಗರೇ ಸೋಂಕು ಹರಡಲು ಕಾರಣ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಯಾರೋ ಕಿಡಿಗೇಡಿಗಳು ಮಾಡಿದ ದುಷ್ಕೃತ್ಯದಿಂದ ನಾಗರಿಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಗುರುವಾರದಂದು ನಡೆದಿದೆ.

ಟಿವಿ9 ದೃಶ್ಯ ಮಾಧ್ಯಮದ ಲೋಗೋ ಬಳಸಿ ಬೇರೆ ಸುದ್ದಿಯನ್ನು ಅಳಿಸಿ ಆ ಜಾಗದಲ್ಲಿ ಬೆಳ್ಳಾರೆಯ ವಿಚಾರವನ್ನು ಸೇರಿಸಿ ವಾಟ್ಸ್ಅಪ್ ಮೂಲಕ ಶೇರ್ ಮಾಡಲಾಗಿತ್ತು. ಇದು ಸುಳ್ಳು ಸುದ್ದಿಯಾಗಿದ್ದು, ಯಾರೋ ಕಿಡಿಗೇಡಿಗಳು ವಾಟ್ಸ್ಅಪ್ ಮೂಲಕ ಹರಿಯಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Also Read  ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆಗೆ ರಾಜ್ಯ ಸರಕಾರ ಆದೇಶ

 

 

error: Content is protected !!
Scroll to Top