ರಾಜ್ಯದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ➤ ಕುವೈತ್ ನಿಂದ ಹಡಗಿನಲ್ಲಿ ಮಂಗಳೂರಿಗೆ ಬಂತು ಮೆಡಿಕಲ್ ಕಿಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.10. ರಾಜ್ಯದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವುದರ ನಡುವೆ ವಿದೇಶಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಸೋಮವಾರದಂದು ಕುವೈಟ್ ನಿಂದ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್, ಆಕ್ಸಿಜನ್, ಟ್ಯಾಂಕ್ಸ್, ಆಕ್ಸಿಜನ್ ಕಾನ್ಸೆನ್’ಟ್ರೇಟರ್ ತುಂಬಿದ ಒಂದು ಹಡಗು ನವಮಂಗಳೂರು ಬಂದರಿಗೆ ಆಗಮಿಸಿತು. ಕುವೈತ್ ನಿಂದ ಆಗಮಿಸಿದ ಮೆಡಿಕಲ್ ಕಿಟ್ ಹೊಂದಿದ ಹಡಗನ್ನು ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಪ್ರಮುಖರು ಬರಮಾಡಿಕೊಂಡರು. ಮಂಗಳವಾರದಂದು ಎರಡು ಹಡಗುಗಳ ಮೂಲಕ ಇನ್ನೂ ಹೆಚ್ಚಿನ ವೈದ್ಯಕೀಯ ಸವಲತ್ತುಗಳನ್ನು ಕುವೈತ್ ಸರಕಾರವು ಮಂಗಳೂರಿಗೆ ಕಳುಹಿಸಲಿದೆ.

Also Read  ಮೆಕ್ಸಿಕೊ: ವಲಸಿಗರ ಬಂಧನ ಕೇಂದ್ರದಲ್ಲಿ ಭೀಕರ ಅಗ್ನಿದುರಂತ…!!        ➤ ಕನಿಷ್ಠ 37 ಮಂದಿ ಮೃತ್ಯು

 

 

 

error: Content is protected !!
Scroll to Top