ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ಮೂರನೇ ಬಲಿ ➤ 32 ವರ್ಷದ ಯುವ ಇಂಜಿನಿಯರ್ ಮೃತ್ಯು



(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಶನಿವಾರದಂದು ಮೂರನೇ ಜೀವ ಬಲಿಯಾಗಿದೆ.





ಕಡಬ ತಾಲೂಕಿನ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ 32 ವರ್ಷದ ಯುವಕನೋರ್ವ ಶನಿವಾರದಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇಂಜೀನಿಯರ್ ಪದವೀಧರನಾಗಿದ್ದ ಮೃತ ಯುವಕ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎರಡು ವಾರದ ಹಿಂದೆ ಊರಿಗೆ ಅಗಮಿಸಿದ್ದ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌.






ಕೊರೋನಾ ಎರಡನೇ ಅಲೆಗೆ ಯುವಜನರೇ ಟಾರ್ಗೆಟ್ ಆಗಿದ್ದು, ಕಳೆದ ವಾರವಷ್ಟೇ ಕಡಬ ತಾಲೂಕಿನ ಕಾಣಿಯೂರಿನ ನಿವಾಸಿ 32 ವರ್ಷದ ಯುವಕನೋರ್ವ ಬಲಿಯಾಗಿದ್ದರು. ಶುಕ್ರವಾರವಷ್ಟೇ ರಾಮಕುಂಜ ಗ್ರಾಮದ ಪೆರ್ಜಿ ನಿವಾಸಿ 45 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ದರು.

 

 

 

error: Content is protected !!
Scroll to Top