ಬಟ್ಟೆ, ಮೊಬೈಲ್, ಚಿನ್ನದಂಗಡಿ ಮುಚ್ಚುವಂತೆ ಸರಕಾರದಿಂದ ಸುತ್ತೋಲೆ ➤ ಕಡಬ ವ್ಯಾಪ್ತಿಯ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚುವಂತೆ ಎಸ್ಐ ರುಕ್ಮನಾಯ್ಕ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕೊರೋನಾ ಹತೋಟಿಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸರಕಾರವು ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ ಅಂಗಡಿಗಳನ್ನು ಮುಚ್ಚುವಂತೆ ದಿಢೀರ್ ಸೂಚನೆ ನೀಡಿದೆ.

ಇದೀಗ ಪೊಲೀಸರು ಮಾಲಕರಲ್ಲಿ ಅಂಗಡಿ ಮುಚ್ಚುವಂತೆ ಸೂಚಿಸಿದ್ದು, ಕೆಲವೆಡೆ ವ್ಯಾಪಾರಿಗಳು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚುವಂತೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್ ಸೂಚಿಸಿದ್ದಾರೆ.

Also Read  ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ  ಅಪಾಯದಿಂದ ಪಾರು

 

 

error: Content is protected !!
Scroll to Top