ಅನ್ನಭಾಗ್ಯಕ್ಕೆ ಕನ್ನ ಹಾಕಿ ಗಾಯದ ಮೇಲೆ ಬರೆ ಎಳೆದ ಸರಕಾರ ➤ ಇನ್ಮುಂದೆ ಬರೀ 2 ಕೆಜಿ ಅಕ್ಕಿ..‼️

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.22. ಕೊರೋನಾ ಸಂಕಷ್ಟದ ನಡುವೆ ಅನ್ನಭಾಗ್ಯ ಅಕ್ಕಿಗೆ ಸರಕಾರವು ಕನ್ನ ಹಾಕಿದ್ದು, ಈ ತಿಂಗಳಿನಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯ ಬದಲಾಗಿ 2 ಕೆಜಿ ಅಕ್ಕಿ ವಿತರಿಸಲು ಸರಕಾರವು ಮುಂದಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಡ ಜನತೆಯ ಹಸಿವು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಪ್ರತೀ ತಿಂಗಳು ಓರ್ವ ಸದಸ್ಯನಿಗೆ ತಲಾ 7 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ತದ ನಂತರ ಯಡಿಯೂರಪ್ಪ ಸರಕಾರದಲ್ಲಿ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ 5 ಕೆಜಿಗೆ ಇರಿಸಲಾಗಿತ್ತು. ಇದೀಗ ಮತ್ತೆ 3 ಕೆಜಿ ಅಕ್ಕಿಯನ್ನು ಕಡಿತಗೊಳಿಸಲಾಗಿದ್ದು, ಇನ್ಮುಂದೆ ಕೇವಲ 2 ಕೆಜಿ ಅಕ್ಕಿ ದೊರೆಯಲಿದೆ. ವ್ಯತ್ಯಾಸವನ್ನು ಸರಿದೂಗಿಸಲು ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳವನ್ನು ನೀಡುತ್ತಿದೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿರುವುದಕ್ಕೆ ಹಲವು ಕಾರ್ಡ್‌ ದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Also Read  'ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳ ಧರಣಿ'    ಸಿಎಂ ಸಿದ್ದರಾಮಯ್ಯ

 

 

 

error: Content is protected !!
Scroll to Top