ಕೋಡಿಂಬಾಳ ಸೈಂಟ್ ಜಾರ್ಜ್ ಚರ್ಚಿನ ಆಡಳಿತ ಸಮಿತಿ ರಚನೆ ➤ ಟ್ರಸ್ಟಿಯಾಗಿ ಸಂದೀಪ್ ಬಳ್ಳಿಕಜೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.19. ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ಇದರ 2021-22 ನೇ ಸಾಲಿನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.


ನಿರ್ದೇಶಕರಾಗಿ ವಂ.ರೆ.ಫಾ ದಾನಿಯೇಲ್ ಕಡಕಂಪಳ್ಳಿ, ಟ್ರಸ್ಟಿಯಾಗಿ ಸಂದೀಪ್ ಬಳ್ಳಿಕಜೆ, ಕಾರ್ಯದರ್ಶಿಯಾಗಿ ಸನೀಶ್ ಬಿ.ಟಿ ಅವರು ಆಯ್ಕೆಯಾದರು. ಇನ್ನುಳಿದಂತೆ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ವಿಜು ವರ್ಗೀಸ್, ಜೋಸ್ ಪ್ರಕಾಶ್, ಜೆರಿನ್ ವಿ.ಜೆ, ಬಿನೋಯಿ ಇಯ್ಯಾಲಿಲ್, ಜಿಬಿ ಬಿನು, ಲಿಸ್ಸಿ ಪುಳಿಕುಕ್ಕು, ಜಾನ್ಸಿ ಬಿನು, ಪ್ರಮಿತಾ ಸಂದೀಪ್, ಅನ್ನಮ್ಮ ಚೆಂಬಿತ್ತಾನಂ, ಶೈಲಾ ಸನೀಶ್, ರೋಸಮ್ಮ ಎಂಬವರು ಆಯ್ಕೆಯಾದರು. ಮಲಂಕರ ಕ್ಯಾಥೊಲಿಕ್ ಸಭಾ ನಿಯಮಾವಳಿಯಂತೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ರೆ.ಫಾ ದಾನಿಯೇಲ್ ಕಡಂಕಪಳ್ಳಿ ಹಾಗೂ ಧರ್ಮಭಗಿನಿಯರು ಈ ಸಮಿತಿ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿದ್ದರು.

Also Read  ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪದವಿಗೆ ಅರ್ಜಿ ಅವಧಿ ವಿಸ್ತರಣೆ

 

 

 

error: Content is protected !!
Scroll to Top