ಬಂಟ್ವಾಳ: ಮನೆಮಂದಿ ನಾಟಕ ವೀಕ್ಷಣೆಗೆ ತೆರಳಿದ್ದ ವೇಳೆ 4 ಮನೆಗಳಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 16. ಮನೆಮಂದಿ ನಾಟಕ ನೋಡಲು ಹೋಗಿದ್ದ ಸಂದರ್ಭ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ನಗದು ಕದ್ದೊಯ್ದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ನಡೆದಿದೆ.

ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿನ ನಾಲ್ಕು ಮನೆಗಳಿಗೆ ನುಗ್ಗಿದ್ದಾರೆ. ಮಜಿ ನಿವಾಸಿ ಮನೋಜ್ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಎಂಟು ಸಾವಿರ ರೂ ನಗದನ್ನು ಕಳವುಗೈದಿದ್ದಾರೆ. ಉಳಿದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಮನೆಯನ್ನು ಸಂಪೂರ್ಣ ಜಾಲಾಡಿದ್ದು, ಯಾವುದೇ ವಸ್ತುಗಳು ಕೈಗೆ ಸಿಗದೆ ಬರಿ ಕೈಯಲ್ಲಿ ಹಿಂತಿರುಗಿದ್ದಾರೆ. ತುಂಬೆ ಸಮೀಪದ ಮಜಿ ಎಂಬಲ್ಲಿ ನಡೆಯುತ್ರಿದ್ದ “ಶಿವಧೂತೆ ಗುಳಿಗೆ” ಎಂಬ ನಾಟಕ ಪ್ರದರ್ಶನ ವೀಕ್ಷಿಸಲು ಈ ಪರಿಸರದ ಬಹುತೇಕ ಮನೆಯವರು ಮನೆಗೆ ಬೀಗ ಹಾಕಿ ತೆರಳಿದ್ದರು. ಆದರೆ ನಾಟಕ ವೀಕ್ಷಿಸಿ ವಾಪಾಸು ಮನೆಗೆ ತೆರಳಿ ನೋಡಿದಾಗ ಮನೆಯ ಬೀಗ ಮುರಿದು ಮನೆಗೆ ಅಕ್ರಮ ಪ್ರವೇಶ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂಟ್ವಾಳಎಸ್.ಐ ಪ್ರಸನ್ನ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆ ➤ ಅರ್ಜಿ ಆಹ್ವಾನ

 

error: Content is protected !!
Scroll to Top