ಮಂಗಳೂರು: ಮಸೀದಿಗೆ ಕಲ್ಲೆಸೆತ ➤ ಇಬ್ಬರು ಬಾಲಕರ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 13. ಇಲ್ಲಿನ ಜನತಾ ಕಾಲೋನಿಯ ಜುಮ್ಮಾ ಮಸೀದಿಯೊಂದಕ್ಕೆ ಕಲ್ಲು ಬಿಸಾಕಿ ಕಿಟಕಿಯ ಗಾಜು ಒಡೆದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಏ.4 ರಂದು ಮಧ್ಯರಾತ್ರಿ ವೇಳೆಗೆ ಇಡ್ಯಾ ಗ್ರಾಮದ ಜನತಾ ಕಾಲೋನಿಯಲ್ಲಿರುವ ಜುಮ್ಮಾ ಮಸೀದಿಗೆ ಕಲ್ಲು ಬಿಸಾಕಿ ಪರಾರಿಯಾಗಿದ್ದರು. ಈ ಕುರಿತು ಆಡಳಿತ ಮಂಡಳಿ ದೂರು ದಾಖಲಿಸಿತ್ತು. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸುರತ್ಕಲ್ ನಿರೀಕ್ಷಕ ಮತ್ತು ಉಪನಿರೀಕ್ಷಕರ ನೇತೃತ್ವದ ತನಿಖಾ ತಂಡಕ್ಕೆ ಸೂಚಿಸಿದ್ದರು. ಇದರಂತೆ ಮಸೀದಿ ಹಾಗೂ ಜನತಾ ಕಾಲೋನಿಯ ಪರಿಸರದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳನಲ್ಲಿ ಸಿಕ್ಕ ಸುಳಿವು ಆಧಾರಿಸಿ ಆರೋಪಿಗಳ ಮಾಹಿತಿ ಕಲೆಹಾಕಿದ ತನಿಖಾ ತಂಡವು ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಅಲ್ಲದೇ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಫೆ. 5 ರಿಂದ ಪ್ರತಿ ಮನೆಗೆ ಉಚಿತ ವಿದ್ಯುತ್ ಗೆ ನೋಂದಣಿ ➤ ರಣದೀಪ್ ಸುರ್ಜೇವಾಲಾ..!

error: Content is protected !!
Scroll to Top