ಪ್ರೇಯಸಿಯ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 06. ಪ್ರೇಯಸಿಯನ್ನು ಕೊಲೆಮಾಡಿ ಪ್ರಿಯತಮ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಂಡೆಪಾಳ್ಯದ ಸೋಮಸುಂದರ ಪಾಳ್ಯದಲ್ಲಿ ನಡೆದಿದೆ.

ಸೋಮ ಸುಂದರಪಾಳ್ಯದ ರಾಜು ಝೊಮ್ಯಾಟೊ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ, ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಬಂದಿದ್ದು, ಇಬ್ಬರೂ ದೂರವಾಗಿದ್ದರು. ಇದೇ ಕೋಪಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಬಳಿಕ ತಾನೂ ಸಾಯಲು ನಿರ್ಧರಿಸಿ ಸೋಮವಾರ ಬೆಳಗ್ಗೆ ಯಶವಂತಪುರ-ಮಲ್ಲೇಶ್ವರ ರೈಲ್ವೆ ಮಾರ್ಗ ಮಧ್ಯೆ ರೈಲಿನಿಂದ ಜಿಗಿದಿದ್ದಾನೆ. ರೈಲಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ತೀವ್ರತರದ ಪೆಟ್ಟಾಗಿತ್ತು. ಸ್ಥಳೀಯರ ಸಹಕಾರದಿಂದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಮೃತ್ಯು..

error: Content is protected !!
Scroll to Top