ಕಡಬದಲ್ಲಿ ಮತ್ತೆ ಕೊರೋನಾ ಸದ್ದು ➤ 21 ವರ್ಷದ ಯುವಕನಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕಳೆದ ಹಲವು ಸಮಯಗಳಿಂದ ಸೈಲೆಂಟ್ ಆಗಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಕಡಬಕ್ಕೆ ಕಾಲಿಟ್ಟಿದೆ.

ಆರೋಗ್ಯ ಇಲಾಖೆಯ ಮಾಹಿತಿಯನುಸಾರ
ಕಡಬ ತಾಲೂಕಿನ ಉದನೆಯ 21 ವರ್ಷದ ವ್ಯಕ್ತಿಗೆ ಕೊರೋನಾ ದೃಢಗೊಂಡಿದೆ. ಇನ್ನುಳಿದಂತೆ ಪುತ್ತೂರಿನ ಪತ್ರಕರ್ತರೊಬ್ಬರು ಸೇರಿದಂತೆ ಪುತ್ತೂರು ಮತ್ತು ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢಗೊಂಡಿದೆ ಎನ್ನಲಾಗಿದೆ. ಪುತ್ತೂರು ತಾಲೂಕಿನ ಬನ್ನೂರಿನ 64 ವರ್ಷದ ಪುರುಷ, ಸರ್ವೆಯ 12 ವರ್ಷದ ಬಾಲಕಿ, ಮುಂಡೂರಿನ 70 ವರ್ಷದ ವೃದ್ಧ, ಬನ್ನೂರಿನ 63 ವಷದ ಪುರುಷ, ಬೊಳುವಾರಿನ 51 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

Also Read  ಸುಳ್ಯ: ಮೀಸಲು ಅರಣ್ಯದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ; 30 ಮಂದಿ ವಶ, ಮುಚ್ಚಳಿಕೆ ಬರೆಸಿ ಬಿಡುಗಡೆ

 

 

error: Content is protected !!
Scroll to Top