(ನ್ಯೂಸ್ ಕಡಬ) newskadaba.com ಮಲಪ್ಪುರಂ, ಮಾ. 26. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರತಿನಿಧಿ ಸಭೆಯು ಕೇರಳದ ಮಲಪ್ಪುರಂ ನಲ್ಲಿ ನಡೆಯಿತು. ಎರಡು ದಿನಗಳ ಪ್ರತಿನಿಧಿ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಎಂ.ಎಸ್ ಸಾಜಿದ್ ವಹಿಸಿ ಮಾತನಾಡಿ “ದೇಶದಲ್ಲಿ ಅಸಮಾನತೆ ಮತ್ತು ಅಭದ್ರತೆ ಹೆಚ್ಚುತ್ತಿರುವಾಗ ವಿದ್ಯಾರ್ಥಿ ಸಮುದಾಯವು ಅತೀ ಕ್ರಿಯಾಶೀಲ ಪಾತ್ರವನ್ನು ವಹಿಸಬೇಕಾಗಿದೆ” ಎಂದು ಅವರು ಹೇಳಿದರು.
ಸಭೆಯಲ್ಲಿ ದೇಶದ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ವಿಷಯಗಳ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ಕಾರ್ಯದರ್ಶಿ ಇರ್ಶಾದ್ ಕಾವು ವಾರ್ಷಿಕ ವರದಿ ವಾಚಿಸಿದರು. ಸಭೆಯಲ್ಲಿ ವಿವಿಧ ರಾಜ್ಯದ ಪ್ರತಿನಿಧಿಗಳು ಭಾಗವಹಿಸಿದರು.
ನೂತನ ನಾಯಕರ ಆಯ್ಕೆ:-
2021-22 ರ ಸಾಲಿನ ನೂತನ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಎಸ್ ಸಾಜಿದ್ ಕೇರಳ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಾನ್ ಸಾದಿಕ್ ಮಂಗಳೂರು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಾದಿ ಕೇರಳ, ಹುಮಾ ಕೌಸರ್ ಬಿಹಾರ್, ಕಾರ್ಯದರ್ಶಿಯಾಗಿ ಸ್ವದಕತ್ ಶಾ ಬೆಂಗಳೂರು, ಅಬ್ದುಲ್ ನಾಝರ್ ಕೇರಳ, ಕೋಶಾಧಿಕಾರಿಯಾಗಿ ಜಾಹಿದುಲ್ ಇಸ್ಲಾಂ ಅಸ್ಸಾಂ, ಸಮಿತಿ ಸದಸ್ಯರಾಗಿ ಆತಿಕುರ್ರಹ್ಮಾನ್, ರವೂಫ್ ಶರೀಫ್, ಸೈಫುರ್ರಹ್ಮಾನ್, ಇಮ್ರಾನ್ ಪಿ.ಜೆ, ಫಾತಿಮಾ ಶೆರಿನ್, ಪಿ.ವಿ ಶುಹೈಬ್, ನಿಶಾ ತಮಿಳುನಾಡು, ಫರ್ಹಾನ್ ಕೋಟ ಮೊದಲಾದವರನ್ನು ಆಯ್ಕೆ ಮಾಡಲಾಯಿತು.