? ರಾಜ್ಯದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ ಇಂದೇ ನಿರ್ಧಾರವಾಗುತ್ತಾ ಲಾಕ್-ಡೌನ್..❓ ➤ ಲಾಕ್-ಡೌನ್ ಆದಲ್ಲಿ ಶಾಲಾ-ಕಾಲೇಜುಗಳಿಗೆ ಬೀಳಲಿದೆ ಬ್ರೇಕ್..‼️

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 22.‌ ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆ ಕೊರೋನಾ ನಿಯಂತ್ರಣಕ್ಕಾಗಿ ಸೆಮಿ ಲಾಕ್-ಡೌನ್ ಹೇರಿಕೆಯ ಮಾತುಗಳು ಕೇಳಿಬರುತ್ತಿರುವ ಕಾರಣ ಇಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.


ಕೊರೊನಾ ನಿಯಂತ್ರಣಕ್ಕೆ ಶಾಲೆ- ಕಾಲೇಜುಗಳ ಬಂದ್ ಮಾಡುವುದು, ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ, ಈಜುಕೊಳ ಹಾಗೂ ಜಿಮ್ ಗಳಿಗೆ ನಿರ್ಬಂಧ ಹೇರಿಕೆ ಸೇರಿದಂತೆ ಹಲವು ಸಲಹೆಗಳನ್ನು ಕೋವಿಡ್ ತಾಂತ್ರಿಕ ಸಮಿತಿಯು ನೀಡಿದ್ದು, ಇದೀಗ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೂಡಾ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಮುಂದಿನ ಎರಡು ವಾರಗಳ ಕಾಲ‌ ಸೆಮಿ‌ ಲಾಕ್ ಡೌನ್ ಹೇರಿಕೆಯ ಮಾತುಗಳು ಕೂಡ ಕೇಳಿಬರುತ್ತಿದೆ. ಕಠಿಣ ನಿರ್ಧಾರಗಳು ಜಾರಿಯಾದಲ್ಲಿ ಜಾತ್ರೆ,‌‌ ಮದುವೆ, ಸಭೆ- ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ‌. ಅಷ್ಟೇ ಅಲ್ಲದೇ ಶಾಲಾ- ಕಾಲೇಜು, ಹಾಸ್ಟೆಲ್ ಗಳಿಗೂ ಬೀಗ ಬೀಳುವ ಸಾಧ್ಯತೆಯಿದೆ.

Also Read  ಸಮುದ್ರದ ಮಧ್ಯದಲ್ಲಿ ಮಗುಚಿ ಬಿದ್ದ ಮೀನುಗಾರಿಕಾ ದೋಣಿ ➤ ದಡ ಸೇರಿದ 6 ಮಂದಿ ಮೀನುಗಾರರು

error: Content is protected !!
Scroll to Top