ಆಲಂಕಾರು ಶ್ರೀ ಭಾರತೀ ಶಾಲೆಗೆ 2 ಉಚಿತ ಬಸ್‌ಗಳ ಹಸ್ತಾಂತರ ➤ ಕರ್ಣಾಟಕ ಬ್ಯಾಂಕ್ ಮತ್ತು LIC ಪ್ರಾಯೋಜಕತ್ವ

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಆಲಂಕಾರು ಭಾರತೀ ಶಾಲೆಗೆ ಕರ್ನಾಟಕ ಬ್ಯಾಂಕ್ ಹಾಗೂ ಭಾರತೀಯ ಜೀವ ವಿಮಾ ನಿಗಮವು ಉಚಿತವಾಗಿ ಎರಡು ಬಸ್ ಗಳನ್ನು ಕೊಡುಗೆಯಾಗಿ ನೀಡಿವೆ.

ಕರ್ನಾಟಕ ಬ್ಯಾಂಕ್ ಸಿಯಸ್ಆರ್ ನಿಧಿಯಿಂದ ಕೊಡಲ್ಪಟ್ಟ ಬಸ್ಸನ್ನು ಮಂಗಳೂರಿನ ಕೇಂದ್ರ ಕಛೇರಿ ಪರಿಸರದಲ್ಲಿ ಬ್ಯಾಂಕ್ ನ ಆಡಳಿತ ನಿರ್ದೇಶಕ ರಾದ ಶ್ರೀ ಮಹಾಬಲೇಶ್ವರ ಎಂ.ಎಸ್. ಅವರು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಯವರಾದ ಡಾ.ಕೃಷ್ಣ ಭಟ್ ಕೋಂಕೋಡಿ, ಶಾಲೆಯ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ ಅತ್ರಿ ಜಾಲು, ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕ್ ನ ಉನ್ನತ ಅಧಿಕಾರಿಗಳು ಹಾಜರಿದ್ದರು.

ಭಾರತೀಯ ಜೀವ ವಿಮಾ ನಿಗಮದ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ವತಿಯಿಂದ ಕೊಡಲ್ಪಟ್ಟ ಬಸ್ಸನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೀವ ವಿಮಾ ನಿಗಮದ ಉಡುಪಿ ವಿಭಾಗದ ಸೀನಿಯರ್ ಡಿವಿಶನಲ್ ಮೇನೇಜರ್ ಶ್ರೀಮತಿ ಬಿಂದು ರಾಬರ್ಟ್ ಅವರು ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಕನಕಲತಾ ಎಸ್.ಎನ್ ಭಟ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ರಾದ ಡಾ.ಸುಧಾ ಎಸ್. ರಾವ್, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕೂಡೂರು, ಗೌರವಾಧ್ಯಕ್ಷ ಶ್ರೀ ಕೃಷ್ಣ ಕುಮಾರ ಅತ್ರಿ ಜಾಲು, ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಹಾಗೂ ಪುತ್ತೂರು ಘಟಕದ ವಿವಿಧ ಅಧಿಕಾರಿಗಳು ಹಾಜರಿದ್ದರು.

Also Read  ಮಂಗಳೂರು: ಪಾದಚಾರಿಗೆ ಜೀಪು ಢಿಕ್ಕಿ ➤ ನೆಲ್ಯಾಡಿಯ ವ್ಯಕ್ತಿ ಮೃತ್ಯು

ನಂತರ ಡಾ. ಸುಧಾ ಎಸ್. ರಾವ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಡಾ.ಸುರೇಶ್ ಕುಮಾರ್ ಕೂಡೂರು ಸ್ವಾಗತಿಸಿದರೆ, ಶ್ರೀಮತಿ ಕನಕಲತಾ ಎಸ್ ಎನ್ ಭಟ್ ವಂದಿಸಿದರು. ಶಾಲೆಯ ಶಿಕ್ಷಕರಾದ ಶ್ರೀ ಚಂದ್ರಹಾಸ್ ಹಾಗೂ ಶ್ರೀಮತಿ ಆಶಾ ಕಾರ್ಯಕ್ರಮ ನಿರೂಪಿಸಿದರು.

 

Also Read  ಸಿಮೆಂಟ್ ಲಾರಿ- ಸಕ್ಕರೆ ಲಾರಿ ನಡುವೆ ಅಪಘಾತ ➤ ಚಾಲಕ ಅದೃಷ್ಟವಶಾತ್ ಪಾರು

 

error: Content is protected !!
Scroll to Top