ಬೆಂಗಳೂರಿನ ಅಪ್ರಾಪ್ತ ಬಾಲಕಿ ಪ್ರಿಯಕರನೊಂದಿಗೆ ಕಡಬದಲ್ಲಿ ಪತ್ತೆ ➤ ಜೋಡಿಯನ್ನು ಕರೆದೊಯ್ದ ಶ್ರೀರಾಂಪುರ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಮಾ.20. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಯುವತಿಯೋರ್ವಳು ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕೆಂಜಾಳದಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ.

ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕು| ಪುಷ್ಪ (16) ಎಂಬಾಕೆಯನ್ನು ಆಕೆಯ ಪ್ರಿಯಕರ ಬೆಂಗಳೂರು ನಿವಾಸಿ ಅನಿರುದ್ಧ್ ಅಪಹರಿಸಿರುವ ಬಗ್ಗೆ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಧರ್ಮಸ್ಥಳಕ್ಕೆ ಬಂದಿದ್ದ ಜೋಡಿಯು ಪಾದಯಾತ್ರೆಯ ಮೂಲಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಕಡಬ ಪೊಲೀಸರು ವಿಚಾರಣೆ ನಡೆಸಿ ಈ ಬಗ್ಗೆ ಬೆಂಗಳೂರು ಶ್ರೀರಾಂಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರಿಗೆ ಮಾಹಿತಿ ನೀಡಿದ್ದರು. ಅದರಂತೆ ಕಡಬಕ್ಕಾಗಮಿಸಿದ ಶ್ರೀರಾಂಪುರ ಪೊಲೀಸರು ಜೋಡಿಯನ್ನು ಬೆಂಗಳೂರಿಗೆ ಕರೆದೊಯ್ದಿದೆ ಎಂದು ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್ ತಿಳಿಸಿದ್ದಾರೆ.

Also Read  ಪಾರಿವಾಳ ಹಿಡಿಯಲು ಹೋಗಿ ಇಬ್ಬರು ಮಕ್ಕಳು ಗಂಭೀರ!

 

 

error: Content is protected !!
Scroll to Top