ಕನ್ನಡ ಸುಗಮ ಸಂಗೀತಲೋಕದ ಧ್ರುವತಾರೆ, ಸಾಹಿತಿ ಡಾ/ಎನ್.ಎಸ್.ನಾರಾಯಣಭಟ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 06. ಕನ್ನಡದ ಖ್ಯಾತ ಕವಿ ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು(85 ) ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಎನ್.ಎಸ್.ಎಲ್ ಎಂದೇ ಸಾಹಿತ್ಯಲೋಕದಲ್ಲಿ ಚಿರಪರಿಚಿತರಾಗಿದ್ದ ಇವರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಳಗ್ಗೆ 4:45ರ ಸುಮಾರಿಗೆ ಬನಶಂಕರಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಕವಿತೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ ಎನ್.ಎಸ್.ಎಲ್ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಾಧ್ಯಾಪಕರಾಗಿದ್ದರು. ಇವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಎಲಿಯಟ್ಸ್​, ಷೇಕ್ಸ್​ಪಿಯರ್​ ಕಾವ್ಯಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಹೊರಳು ದಾರಿಯಲ್ಲಿ ಕಾವ್ಯ’ ಈ ವಿಮರ್ಶಾಗ್ರಂಥಕ್ಕೆ 1974ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.

Also Read  ಸಂಬಂಧಿಕರ ಮನೆಗೆ ತೆರಳಿ ಅಲ್ಲಿಂದ ನಾಪತ್ತೆಯಾಗಿದ್ದ ಪೆರಾಬೆ ನಿವಾಸಿ ಕಲ್ಲಡ್ಕದಲ್ಲಿ ಪತ್ತೆ..!

error: Content is protected !!
Scroll to Top