(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 06. ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 9 ಮಂದಿಯ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಈ ಹಿಂದೆ ನೇಮಿಸಲಾಗಿದ್ದ
ಅಭಿವೃದ್ಧಿ ಸಮಿತಿಯ ಕೆಲ ಸದಸ್ಯರನ್ನು ಉಳಿಸಿಕೊಂಡು ಹೊಸದಾಗಿ ನಾಲ್ಕು ಮಂದಿಯನ್ನು ಸೇರ್ಪಡೆಗೊಳಿಸಿ ಒಟ್ಟು 9 ಮಂದಿಯ ವ್ಯವಸ್ಥಾಪನಾ ಸಮಿತಿ ರಚಿಸಿ ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮಾ.5 ರಂದು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ 6 ಜನರ ಅಭಿವೃದ್ಧಿ ಸಮಿತಿಯನ್ನು ಮುಂದಿನ 3 ವರ್ಷಗಳ ಅವಧಿಗೆಂದು ರಚಿಸಲಾಗಿತ್ತು. ಇದರಲ್ಲಿ ಪಿ.ಜಿ.ಎಸ್.ಪ್ರಸಾದ್, ಪ್ರಸನ್ನ, ಎಸ್.ಮೋಹನ್ ರಾಮ್, ವನಜಾ ಭಟ್ ಹಾಗೂ ಮನೋಹರ ರೈ ಸಮಿತಿ ಸದಸ್ಯರಾಗಿದ್ದರು. ಶಾಸಕ ಎಸ್ ಅಂಗಾರ ಅಧ್ಯಕ್ಷರಾಗಿದ್ದರು. ಇದೀಗ ನೂತನ ಸಮಿತಿ ರಚನೆಯಾಗಿದ್ದು, ಇದರಲ್ಲಿ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ, ಬಾಳುಗೋಡಿನ ಲೋಕೇಶ್ ಮುಂಡೊಕಜೆ, ಸುಬ್ರಹ್ಮಣ್ಯದ ವನಜ ವಿ ಭಟ್, ಸುಬ್ರಹ್ಮಣ್ಯ ಪರ್ವತಮುಖಿಯ ಶೋಭಾ ಗಿರಿಧರ್ ಸ್ಕಂದ, ನೆಲ್ಲೂರು ಕೆಮ್ರಾಜೆಯ ಮೋಹನ ರಾಮ್ ಸುಳ್ಳಿ, ಕಡಬ ಬಂಟ್ರ ಗ್ರಾಮದ ಅಳಿಮಾರು ಪಟ್ಟೆಮನೆ ಮನೋಹರ ರೈ, ಕಳಂಜದ ಪಿ.ಜಿ.ಎಸ್.ಎನ್ ಪ್ರಸಾದ್, ಬೆಳ್ತಂಗಡಿ ತಣ್ಣೀರುಪಂತದ ಪ್ರಸನ್ನ ದರ್ಬೆ, ಬೆಂಗಳೂರು ಮಂಜುನಾಥ ನಗರದ ಶ್ರೀವತ್ಸ ಇವರನ್ನು ಸರಕಾರ ನೇಮಕಗೊಳಿಸಿದೆ. ಈ ಹಿಂದೆ ಸರಕಾರ ರಚಿಸಿದ ಮೂರು ವರ್ಷಗಳ ಅವಧಿಯ ಅಭಿವೃದ್ಧಿ ಸಮಿತಿ ಬದಲಿಗೆ ಪೂರ್ಣಾವಧಿ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.