ಎಡಮಂಗಲ: ದಲಿತ ಮಹಿಳೆಯೋರ್ವರ ಮನೆ ಧ್ವಂಸ ➤ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

(ನ್ಯೂಸ್ ಕಡಬ) newskadaba.com ಎಡಮಂಗಲ, ಮಾ. 05. ದಲಿತ ಮಹಿಳೆಯೋರ್ವರಿಗೆ ಸೇರಿದ ಮನೆಯೊಂದನ್ನು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಧ್ವಂಸ ಮಾಡಿರುವ ಘಟನೆ ಎಡಮಂಗಲದಲ್ಲಿ ಬುಧವಾರದಂದು ನಡೆದಿದೆ.

ಕಜೆತ್ತಡ್ಕದ ಬಾಲಕಿ ಎಂಬವರ ಮನೆಯನ್ನು ಹಾನಿ ಮಾಡಲಾಗಿದ್ದು, ಸೀಟು ಸಹಿತ ಮನೆಯ ವಸ್ತುಗಳನ್ನೆಲ್ಲ ಎಸೆಯುವ ಅಮಾನವೀಯ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟಗೆ ಸಂಬಂಧಿಸಿ ಆರೋಪಿಗಳಾದ ವಿ ಶೆಟ್ಟಿ ಹಾಗೂ ವಿದ್ಯಾ ಸೇರಿದಂತೆ ನಾಲ್ವರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಎಫ್. ಐ.ಆರ್ ದಾಖಲಾಗಿದೆ. ಬಾಲಕಿ ಎಂಬವರು ನೀಡಿದ ದೂರಿನಲ್ಲಿ ಜಾತಿ ನಿಂದನೆ ಮತ್ತು ದೈಹಿಕ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ವಿವರಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಆಗ್ರಹಿಸಿದ್ದಾರೆ.

Also Read  ಶರಾಬಿನ ನಶೆ : ಬ್ಲೇಡಿನಿಂದ ಕೈ ಕೋಯ್ದುಕೊಂಡು ಮಹಿಳೆ ಆತ್ಮಹತ್ಯೆ

error: Content is protected !!
Scroll to Top