(ನ್ಯೂಸ್ ಕಡಬ) newskadaba.com ಕಡಬ, ಮಾ. 03. ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಸಾಕು ನಾಯಿಯೊಂದರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ರೆಂಜಿಲಾಡಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಎಳುವಾಳೆ ಭಾಸ್ಕರ ಗೌಡ ಎಂಬವರ ಮನೆಯ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ್ದು ನಾಯಿಯು ಗಾಯಗೊಂಡಿದೆ. ಹೇಗೋ ತಪ್ಪಿಸಿಕೊಂಡ ನಾಯಿಯು ತನ್ನ ಜೀವವನ್ನು ಉಳಿಸಿಕೊಂಡಿದೆ. ಮನೆಯ ಅಂಗಳದಲ್ಲಿ ಚಿರತೆ ಗುರುತು ಪತ್ತೆಯಾಗಿದೆ. ಈ ಪರಿಸರದಲ್ಲಿ ಎರಡು ಚಿರತೆಗಳು ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಚಿರತೆ ಕಾಣಸಿಕ್ಕಿದೆ ಎನ್ನಲಾಗಿದೆ.