ಪೆರ್ಲ: ಓಮ್ನಿ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಬೈಕ್ ಸವಾರನಿಗೆ ಗಾಯ



(ನ್ಯೂಸ್ ಕಡಬ) newskadaba.com ಪೆರ್ಲ, ಫೆ. 27. ಮಾರುತಿ ಓಮ್ನಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಇಡಿಯಡ್ಕ ಕೈಕಂಬ ಎಂಬಲ್ಲಿ ನಡೆದಿದೆ.






ಗಾಯಗೊಂಡವರನ್ನು ಬಾಡೂರು ನಿವಾಸಿ ವಿಶ್ವನಾಥ ಕುಲಾಲ್(24) ಎಂದು ಗುರುತಿಸಲಾಗಿದೆ. ಪೆರ್ಲದಿಂದ ಕುಂಬಳೆ ರಸ್ತೆಗೆ ತಿರುವು ಪಡೆಯುತ್ತಿದ್ದ ಓಮ್ನಿ‌ ಕಾರು ಹಾಗೂ ಇಡಿಯಡ್ಕದಿಂದ ಪೆರ್ಲ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಪರಸ್ಪರ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ತಲೆಗೆ ಗಾಯಗೊಂಡು ಮೊಣಕಾಲಿನ ಕೀಲು ಮುರಿತಕ್ಕೊಳಗಾಗಿದೆ. ಗಾಯಗೊಂಡ ವಿಶ್ವನಾಥರನ್ನು ಸ್ಥಳೀಯರಾದ ಯುವ ಮುಖಂಡ ಅಜಯ್ ಪೈ ಎಂಬವರು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.






error: Content is protected !!
Scroll to Top