ಶಿರಾಡಿ: ಪೊಲೀಸ್ ಬಸ್ ಗೆ ಐರಾವತ ಬಸ್ ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.27. ಕೆಎಸ್ಸಾರ್ಟಿಸಿ ವೋಲ್ವೋ ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ಪೊಲೀಸ್ ಬಸ್ಸಿಗೆ ಢಿಕ್ಕಿ ಹೊಡೆದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನ ಕೆಂಪುಹೊಳೆ ಎಂಬಲ್ಲಿ ಶನಿವಾರ ಅಪರಾಹ್ನ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೋಲ್ವೋ ಬಸ್ ಕೆಂಪುಹೊಳೆ ಸಮೀಪದ ತಿರುವೊಂದರಲ್ಲಿ ಓವರ್ ಟೇಕ್ ಮಾಡುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಪೊಲೀಸ್ ಬಸ್ ಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ.

Also Read  ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಪಲ್ಟಿ - ಮಗು ಸಹಿತ ನಾಲ್ವರಿಗೆ ಗಾಯ

 

 

error: Content is protected !!
Scroll to Top