ಕಡಬ: ಅಶ್ವಿನಿ ಸ್ಯಾನಿಟರಿ & ಹಾರ್ಡ್‌ವೇರ್ ನವೀಕೃತ ಮಳಿಗೆ ಶುಭಾರಂಭ ➤ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಏಕೈಕ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸಂಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ಫೆ.26. ಇಲ್ಲಿನ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲೂಷನ್ಸ್ ಹಾಗೂ ಅಶ್ವಿನಿ ಸ್ಯಾನಿಟರಿ- ಹಾರ್ಡ್‌ವೇರ್, ನೂತನ ಟೈಲ್ಸ್ ಶೋ ರೂಮ್‌ನ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭವು ಗುರುವಾರ ನೆರವೇರಿತು.

 

ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಲ್ಟ್ರಾಟೆಕ್ ಮಂಗಳೂರು ಡಿಪೋದ ಮುಖ್ಯಸ್ಥ ಸತ್ಯನಾರಾಯಣ ಬಿ. ಅವರು ಆದಿತ್ಯಾ ಬಿರ್ಲಾ ಕಂಪೆನಿಯ ಅಧೀನದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ. ಜಗತ್ತಿನ 35 ರಾಷ್ಟ್ರಗಳಲ್ಲಿ ವ್ಯವಹರಿಸುತ್ತಿರುವ ಕಂಪೆನಿಯು ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲೂಷನ್ಸ್ ಎನ್ನುವ ಹೆಸರಿನಲ್ಲಿ ಒಂದೇ ಸೂರಿನಡಿ ಕಟ್ಟಡ ನಿರ್ಮಾಣಕ್ಕೆ ಸಂಬಧಿಸಿದ ಎಲ್ಲಾ ವಸ್ತುಗಳು ಸಿಗುವಂತೆ ವಿಶೇಷ ಮಳಿಗೆಗಳನ್ನು ರೂಪಿಸಿದೆ. ಅಶ್ವಿನಿ ಸ್ಯಾನಿಟರಿ ಹಾರ್ಡ್‌ವೇರ್ ಮಾಲಕತ್ವದಲ್ಲಿ ಕಡಬದಲ್ಲಿ ತೆರೆಯಲಾಗಿರುವ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲೂಷನ್ಸ್ ಮಳಿಗೆಯು ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಏಕೈಕ ಮಳಿಗೆಯಾಗಿದೆ ಎಂದರು.

ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ನೂತನ ಟೈಲ್ಸ್ ಶೋ ರೂಮ್‌ನ ಉದ್ಘಾಟನೆ ನೆರವೇರಿಸಿದರು. ವಿಸ್ತೃತ ಮಳಿಗೆಯನ್ನು ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ.ವರ್ಗೀಸ್ ಅವರು ಉದ್ಘಾಟಿಸಿದರು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಹಾಗೂ ಕಡಬ ತಾ.ಪಂ.ನ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅವರು ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಮಾಲಕ ಗಿರೀಶ್‌ಕುಮಾರ್ ಅವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ ನವೀಕೃತ ಮಳಿಗೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಧಿಸಿದ ಎಲ್ಲಾ ರೀತಿಯ ಗುಣಮಟ್ಟದ ಸಾಮಾಗ್ರಿಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿವೆ. ಸುಸಜ್ಜಿತ ನೂತನ ಟೈಲ್ಸ್ ಶೋ ರೂಮ್‌ನಲ್ಲಿ ಗ್ರಾಹಕರ ಆಯ್ಕೆಗೆ ಅನುಕೂಲವಾಗುವಂತೆ ಪ್ರತಿಷ್ಠಿತ ಕಂಪೆನಿಗಳ ಸ್ಯಾನಿಟರಿ, ಟೈಲ್ಸ್ ಗಳ ವಿಶಾಲ ಶ್ರೇಣಿಯ ಸಂಗ್ರಹವಿದೆ ಎಂದರು.

Also Read  ಪುತ್ತೂರು: ಮಗನಿಂದಲೇ ತಾಯಿಯ ಅತ್ಯಾಚಾರ- ಬೆದರಿಕೆ....! ➤ ಪ್ರಕರಣ ದಾಖಲು

ಸಂಸ್ಥೆಯ ಮಾಲಕರಾದ ನಾರಾಯಣ ಮಣಿಯಾಣಿ, ಹೇಮಲತಾ ಹಾಗೂ ಗಿರೀಶ್‌ಕುಮಾರ್ ಕೆ., ಮಂಜೂಷಾ ದಂಪತಿಯನ್ನು ಕಂಪೆನಿಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಶ್ರೀಧರ ಮಣಿಯಾಣಿ ಅವರನ್ನು ಅಭಿನಂದಿಸಲಾಯಿತು. ಅಲ್ಟ್ರಾಟೆಕ್ ಕಂಪೆನಿಯ ವಿವಿಧ ವಿಭಾಗಗಳ ಅಧಿಕಾರಿಗಳಾದ ಜಯಪ್ರಕಾಶ್ ಆರ್., ಚೇತನ್ ಕೆ., ಪ್ರಯೋಗ್ ಎಸ್., ಸುಧೀರ್ ಆರ್. ರಾವ್ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಯಾದವ ಸಭಾದ ಅಧ್ಯಕ್ಷ ಸದಾನಂದ ಮಣಿಯಾಣಿ ಸ್ವಾಗತಿಸಿದರು. ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿ, ವಂದಿಸಿದರು.

Also Read  ರಸ್ತೆ ಸಂಚಾರಗಣತಿ

 

error: Content is protected !!
Scroll to Top