ಉಡುಪಿ: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ಮನೆ ಹಾಗೂ ವಾಹನಕ್ಕೆ ಹಾನಿ ➤ ಜೀವ ಬೆದರಿಕೆ



(ನ್ಯೂಸ್ ಕಡಬ) newskadaba.com ಉಡುಪಿ, ಫೆ. 25. ಉಪ್ಪೂರು ಸೊಸೈಟಿ ಅಧ್ಯಕ್ಷ, ಸಮಾಜಸೇವಕ ಹಾಗೂ ಹಾವಂಜೆ ಗ್ರಾಮ ಪಂಚಾಯತ್‍ ಸದಸ್ಯ ರಮೇಶ್ ಎನ್.ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






ಫೆ.23ರಂದು ರಾತ್ರಿ 10.30ರ ವೇಳೆಗೆ ಮನೆಗೆ ಬಂದ ಕೆಲವರು ಇವರ ಮನೆಗೆ ಮತ್ತು ವಾಹನಕ್ಕೆ ಹಾನಿ ಮಾಡಿದ್ದಲ್ಲದೇ ಮನೆಯ ಗೇಟಿನ ಲೈಟ್ ಗಳನ್ನೂ ಒಡೆದು ಹಾಕಿದ್ದಾರೆ. ಜೊತೆಗೆ ರಮೇಶ್ ಎಂಬವರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಲಾಗಿದೆ.






 


ಈ ಕೃತ್ಯದಲ್ಲಿ ಮಾಜಿ ಸದಸ್ಯ, ಹಾವಂಜೆ ಗ್ರಾಮದ ಪಿಡಬ್ಲ್ಯೂಡಿ ಗುತ್ತಿಗೆದಾರ ಮತ್ತು ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ನ ರಾಜಕೀಯ ವಿರೋಧಿಗಳು ಈ ಭಾಗಿಯಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೊಲೀಸ್ ಇಲಾಖೆ ಕೂಡಲೇ ಇವರೆಲ್ಲರನ್ನೂ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

error: Content is protected !!
Scroll to Top