ಟ್ರೆಕ್ಕಿಂಗ್ ಹೋಗುವವರಿಗೆ ಬಿಗ್ ಶಾಕ್ ➤ ಮಾ. 01ರಿಂದ ಕುಮಾರಪರ್ವತ ಚಾರಣಕ್ಕೆ ನಿಷೇಧ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 24. ಮಾರ್ಚ್ ಒಂದರಿಂದ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣವನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಆದೇಶಿಸಿದೆ.

ಪಶ್ಚಿಮಘಟ್ಟದ ಶೋಲಾ ಅರಣ್ಯಕ್ಕೆ ಬೇಸಿಗೆ ಕಾಲದಲ್ಲಿ ಬೆಂಕಿ ತಗುಲುವ ಹಿನ್ನೆಲೆ ಹಾಗೂ ಮಳೆಗಾಲದಲ್ಲಿ ಭೂ ಕುಸಿತವಾಗುವ ಕಾರಣಕ್ಕೆ ಕುಮಾರಪರ್ವತ ಚಾರಣವನ್ನು ಮುಂದಿನ ಮಳೆಗಾಲದ ಕೊಮೆಯವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನು ಹಂಚಿಕೊಂಡಿದೆ. ಈ ತಾಣವು ಸಮುದ್ರಮಟ್ಟದಿಂದ 1,712 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ತಲುಪಿದರೆ ದೇವಸ್ಥಾನದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಟ್ರೆಕ್ಕಿಂಗ್ ನ ಹಾದಿ ಪ್ರಾರಂಭವಾಗುತ್ತದೆ ಹಾಗೂ ಅಲ್ಲಿಯವರೆಗೂ ಆಟೋಗಳು ಲಭ್ಯವಿರುತ್ತವೆ.

Also Read  ಗುಂಡ್ಯ: ಮೋರಿಗೆ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು ➤ ಚಾಲಕ ಮೃತ್ಯು, ಓರ್ವನಿಗೆ ಗಾಯ

 

 

error: Content is protected !!
Scroll to Top