? ಹೆಚ್ಚುತ್ತಿರುವ ಕೊರೋನಾ ಸೋಂಕಿನ ಹಿನ್ನೆಲೆ ➤ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ➤➤ ಸುತ್ತೋಲೆ ಹೊರಡಿಸಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 22. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ವಿದೇಶಗಳಿಂದ ಬರುವ ಪ್ರಯಾಣಿಕರು 14 ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ ಗೆ ಒಳಪಡುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಹೊಸ ಕೊರೋನಾ ಮಾರ್ಗಸೂಚಿಗಳು ಇಲ್ಲಿವೆ:- ಕೋವಿಡ್-19 ಆರ್‍.ಟಿಪಿಸಿಆರ್ ಪರೀಕ್ಷೆ ನಡೆಸಿ ಕೊರೋನ ನೆಗೆಟಿವ್ ವರದಿಯನ್ನು www.newdelhiairport.in ಆನ್‍ ಲೈನ್ ಪೋರ್ಟಲ್‍ ನಲ್ಲಿ ಅಪ್‍ ಲೋಡ್ ಮಾಡಬೇಕು. ಎಲ್ಲ ಅಂತರ್ರಾಷ್ಟ್ರೀಯ ಪ್ರಯಾಣಿಕರು, ಪ್ರಯಾಣಕ್ಕೂ ಮೊದಲು ಆನ್‍ ಲೈನ್ ಏರ್ ಸುವಿಧಾ ಪೋರ್ಟಲ್‍ ನಲ್ಲಿ ಕೋವಿಡ್ ಸೋಂಕು ಪರೀಕ್ಷೆಯ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು. ಪ್ರಯಾಣಿಕರು ಪ್ರಯಾಣಕ್ಕೆ ಮೊದಲು ಕೊರೋನಾ ಪರೀಕ್ಷೆ ಮಾಡಿರಬೇಕು ಅಲ್ಲದೇ ಪ್ರಯಾಣಿಕರು ವರದಿಯನ್ನು ಪ್ರಮಾಣೀಕರಿಸಬೇಕು. ವಿಮಾನ ಪ್ರಯಾಣಕ್ಕೂ ಮೊದಲು ಪ್ರತಿಯೊಬ್ಬ ಪ್ರಯಾಣಿಕನ ತಾಪಮಾನ ಪರೀಕ್ಷೆ ನಡೆಸಲಾಗುತ್ತದೆ. ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ನಡೆಸಲು ಅನುಮತಿ ನೀಡಲಾಗುತ್ತದೆ. ವಿಮಾನದಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಹಾಗೂ ಅಂತರ ಕಡ್ಡಾಯವಾಗಿರುತ್ತದೆ. ಆರೋಗ್ಯ ಸೇತು ಆ್ಯಪ್ ನ್ನು ಪ್ರಯಾಣಿಕರು ಕಡ್ಡಾಯವಾಗಿ ಬಳಸಬೇಕು. ಯುನೈಟೆಡ್ ಕಿಂಗ್‍ ಡಂ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ಆಗಮಿಸುವ ಪ್ರಯಾಣಿಕರನ್ನು ಏರ್‍ ಲೈನ್ ಪ್ರತ್ಯೇಕವಾಗಿ ಗುರುತಿಸಬೇಕು ಎಂದು ತಿಳಿಸಲಾಗಿದೆ.

error: Content is protected !!

Join the Group

Join WhatsApp Group