ನ್ಯೂಸ್ ಕಡಬ newskadaba.com ಸುಳ್ಯ, ಫೆ.16. ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿಯಲು ಹೊಂಚು ಹಾಕಿದ ಊರವರು ಕೊನೆಗೂ ಸಫಲರಾಗಿದ್ದಾರೆ.
ಸುಳ್ಯದ ಹಳೇಗೇಟಿನ ನರ್ಸರಿ ಒಂದರಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ರಾತ್ರಿ ವೇಳೆ ನಿರಂತರವಾಗಿ ವ್ಯಾಪಾರಕ್ಕೆಂದು ಇಟ್ಟಿದ್ದ ಸಾಮಗ್ರಿಗಳ ಕಳ್ಳತನ ನಡೆಯುತ್ತಿತ್ತು. ಕಳ್ಳನನ್ನು ಹಿಡಿಯಲು ಹಲವು ಬಾರಿ ಸಂಸ್ಥೆಯ ಮಾಲಕರು ಹೊಂಚುಹಾಕಿ ಕುಳಿತರೂ ಏನೂ ಪ್ರಯೋಜನವಾಗಿರಲಿಲ್ಲ. ಸೋಮವಾರ ತಡರಾತ್ರಿ ಕಳ್ಳತನ ಮಾಡಲೆಂದು ಖತರ್ನಾಕ್ ಕಳ್ಳ ಆಗಮಿಸಿದ್ದು, ನರ್ಸರಿಯ ಶೆಡ್ಡಿನ ಹಿಂಭಾಗದಿಂದ ಒಳ ನುಗ್ಗಿದಾಗ ಕಳ್ಳನನ್ನು ಹಿಡಿಯಲು ಹೊಂಚು ಹಾಕಿ ಕುಳಿತಿದ್ದವರು ಕೊನೆಗೂ ಕಳ್ಳನನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆ ಈತ ಸ್ಥಳೀಯ ನಿವಾಸಿಯಾಗಿದ್ದು, ಕಳ್ಳತನ ಮಾಡಿದ ವಸ್ತುಗಳನ್ನು ಸ್ಥಳೀಯ ವ್ಯಾಪಾರಸ್ಥರಿಗೆ ನೀಡುತ್ತಿದ್ದುದಾಗಿ ಬಾಯಿ ಬಿಟ್ಟಿದ್ದಾನೆ.