?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 16. ಇಲ್ಲಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದ ಪರಿಣಾಮವಾಗಿ ಮಣ್ಣಿನಡಿ ಕಣ್ಮರೆಯಾದ ಯುವಕನೋರ್ವನ ಮೃತದೇಹವು ಸತತ ಪ್ರಯತ್ನದ ಫಲವಾಗಿ ಕೊನೆಗೂ ಮಂಗಳವಾರದಂದು ಪತ್ತೆಯಾಗಿದೆ.

ಮೃತರನ್ನು ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20) ಎನ್ನಲಾಗಿದೆ. ಸನತ್ ಶೆಟ್ಟಿ ಮೃತದೇಹವು ಮಣ್ಣು ಹಾಗೂ ಬಂಡೆಯಡಿ ಸಿಲುಕಿದ್ದರಿಂದ ಸತತ 23 ದಿನಗಳ ಕಾರ್ಯಾಚರಣೆ ಬಳಿಕ ಇದೀಗ ಪತ್ತೆಯಾಗಿದೆ. ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ ಸುಮಾರು 22 ದಿನಗಳ ಕಾಲ 30 ಅಡಿಗಳಷ್ಟು ಆಳದ ಮಣ್ಣು ತೆರವು ಕಾರ್ಯವು ನಡೆದಿತ್ತು.

 


ವಿದ್ಯುತ್ ಸಂಪರ್ಕ ಹಾಗೂ ಯಾವುದೇ ಯಂತ್ರೋಪಕರಣ ಬಳಸಲು ಸಾಧ್ಯವಿಲ್ಲದ ಈ ಕಾಡು ಪ್ರದೇಶವಾದರೂ ಜಿಲ್ಲಾಡಳಿತ, ಶಾಸಕರು, ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಮೃತದೇಹದ ಕಾರ್ಯದ ಎಲ್ಲ ಪ್ರಯತ್ನಗಳು ನಡೆದಿದ್ದವು. ಇದೀಗ ಎಲ್ಲರ ಹಾರೈಕೆ ಫಲಿಸಿದ್ದು ಕಡೆಗೂ ಸನತ್ ಶೆಟ್ಟಿ ದೇಹ ಪತ್ತೆಯಾಗಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.

error: Content is protected !!

Join the Group

Join WhatsApp Group