ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಹಿನ್ನೆಲೆ ➤ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಜೂನ್ 30ರ ವರೆಗೆ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com  ಮಂಗಳೂರು, ಫೆ.16.  ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕಿನ ಎಲೆಮಲೆ-ಅರಂತೋಡು ರಸ್ತೆಯ 3.60 ಕಿ.ಮೀ (ಸೇವಾಜೆ) ನ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುವುದರಿಂದ ಫೆಬ್ರವರಿ 15 ರಿಂದ ಜೂನ್ 30 ರವರೆಗೆ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.


ಅರಂತೋಡು ಮಾರ್ಗದಿಂದ ಎಲೆಮಲೆಗೆ ಸಂಚರಿಸುವ ವಾಹನಗಳು ಸುಳ್ಯ-ಪೈಚಾರು-ಸೋಂಣಂಗೇರಿ-ದೊಡ್ಡತೋಟ ಮೂಲಕ ಹಾಗೂ ಎಲೆಮಲೆ ಮಾರ್ಗದಿಂದ ಅರಂತೋಡಿಗೆ ಸಂಚರಿಸುವ ವಾಹನಗಳು ದೊಡ್ಡತೋಟ-ಸೋಣಂಗೇರಿ-ಪೈಚಾರು ಮೂಲಕ ಬದಲಿ ರಸ್ತೆಯಾಗಿ ಅರಂತೋಡಿಗೆ ಸಂಚರಿಸಬಹುದು ಎಂದು ಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಹೊಸ್ಮಠ: ಸೇತುವೆಯ ಮೇಲೆ ತ್ಯಾಜ್ಯ ಎಸೆದ ಕಿಡಿಗೇಡಿಗಳು

error: Content is protected !!
Scroll to Top