ಕಡಬ ತಾಲೂಕಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ತರುವ ಗುರಿ ➤ ಕಡಬ ತಾಲೂಕು ಪಂಚಾಯತ್ ಅಧ್ಷಕ್ಷರಿಂದ “ಶಾಲೆಯತ್ತ ನಮ್ಮ ನಡಿಗೆ” ➤ ಇಂದು ಕಡಬದಲ್ಲಿ “ಶೈಕ್ಷಣಿಕ ಪ್ರಗತಿ ಪರಿಶೀಲನೆ” ಸಭೆ

(ನ್ಯೂಸ್ ಕಡಬ) newskadaba.com ಕಡಬ: ಕೊರೋನಾ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಇದೀಗ ಶಾಲೆ ಕಾಲೇಜುಗಳು ಪ್ರಾರಂಭವಾಗುತ್ತಿದೆ, ಮುಂದಿನ ಮಾರ್ಚ್ ಬಳಿಕ ಎಲ್ಲಾ ಕಾಲೇಜುಗಳು ಶಾಲೆಗಳು ಹಿಂದಿನAತೆಯೇ ನಡೆಯಲಿರುವ ಬಗ್ಗೆ ಸರಕಾರ ಈಗಾಗಲೇ ಸ್ಪಷ್ಟಪಡಿಸಿವೆ, ಅದರಂತೆ ಶೈಕ್ಷಣಿಕ ಚಟುವಟಿಕೆಗಳಿಂದ ತುಸು ದೂರವೇ ಉಳಿದಿದ್ದ ವಿದ್ಯಾರ್ಥಿಗಳನ್ನು ಮತ್ತೆ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಕೊಡಿಸವಲ್ಲಿ ಈಗಾಗಲೇ ಶಿಕ್ಷಕರಿಂದ ಪ್ರಯತ್ನಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು| ರಾಜೇಶ್ವರಿ ಕನ್ಯಾಮಂಗಲ ಅವರು ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಫೆ.೧೬ರಂದು ಕರೆದಿದ್ದಾರೆ. ಸಭೆಯು ಕಡಬ ಸರಸ್ವತೀ ವಿದ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೆಶ್.ಸಿ.ಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೇ ಟಾರ್ಗೇಟ್…
ಮುಂದಿನ ಎಸ್.ಎಸ್.ಎಲ್,ಸಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಯವರು ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮ ನಡೆಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದ್ದಾರೆ. ಶಿಕ್ಷಣ ಇಲಾಖೆ ಈ ಕೆಲಸ ಮಾಡುತ್ತಿರುವಾಗ ಜನಪ್ರತಿನಿಧಿಗಳು ಹಿಂದೆ ಬಿದ್ದಿಲ್ಲ,. ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರಿಂದ ಇದೀಗ ತಾಲೂಕಿನ ಶಾಲೆಗಳ ಪ್ರಗತಿ ಪರಿಶೀಲನೆ ನಡೆಸಿ, ಮುಂದೆ ಎಸ್.ಎಸ್.ಎಲ್,ಸಿ.ಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಶಿಕ್ಷಕರು, ಪೋಷಕರು, ಮತ್ತು ಜನಪ್ರತಿನಿಧಿಗಳು ಏನು ಮಾಡಬೇಕೆನ್ನುವ ಬಗ್ಗೆ ಶಿಕ್ಷಕ ಸಮುದಾಯದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿಯವರದ್ದು ಆಗಿದೆ. ಈಗಾಗಲೇ “ಶಾಲೆಯತ್ತ ನಮ್ಮ ನಡಿಗೆ” ಎಂಬ ಕಾರ್ಯಕ್ರಮ ಹಾಕಿಕೊಂಡಿರುವ ಅವರು ಈಗಾಗಲೇ ಹಲವಾರು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ತರಗತಿಗಳು, ಶಾಲಾ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಸಮಸ್ಯೆಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರದೆ ಅವರು ಉತ್ತಮವಾಗಿ ಕಲಿಯಬೇಕಾದರೆ ಏನು ಮಾಡಬಹುದು ಎನ್ನುವ ಬಗ್ಗೆಯೂ ಅವರು ಶಿಕ್ಷಕರಿಂದ ಮಾಹಿತಿ ಪಡೆಯಲಿದ್ದಾರೆ. ಕಡಬ ತಾಲೂಕಿನಲ್ಲಿ ಉತ್ತಮ ಫಲಿತಾಂಶವನ್ನು ತರುವ ಉದ್ದೇಶದಿಂದ ನೂತನ ತಾಲೂಕು ಪಂಚಾಯತ್ ಅಧ್ಯಕ್ಷರಿಂದ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲನೆ ಮಾಡುವ ಬಗ್ಗೆ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಫೆ.೧೬ರಂದು ಕರೆದಿದ್ದಾರೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯವರೂ ಸಾಥ್ ನೀಡಿದ್ದಾರೆ.

Also Read  ಇದೇ ಫೆಬ್ರವರಿಯಿಂದ‌ ಬಿಗ್ ಬಾಸ್ 8ನೇ ಆವೃತ್ತಿ‌ಆರಂಭ ➤ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್

ಈ ಬಗ್ಗೆ ಮಾತನಾಡಿದ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಅವರು, ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯೆ ಕಲಿಯಬೇಕಿದ್ದರೆ ಪ್ರಮುಖ ಪಾತ್ರ ಶಿಕ್ಷಕರದ್ದು, ಅದಕ್ಕೆ ಪೋಷಕರ ಬೆಂಬಲವೂ ಅಷ್ಟೆ ಬೇಕಾಗುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಇವರನ್ನು ಪ್ರೋತ್ಸಾಹಿಸಿ ಅವರಿಗೆ ನಮ್ಮ ತಾಲೂಕು ಪಂಚಾಯತ್ ತಂಡ ಸಹಕಾರ ನೀಡುವ ಕೆಲಸ ಮಾಡಲಿದೆ.
ಇದಕ್ಕಾಗಿ ಮೊದಲ ಹಂತದಲ್ಲಿ ನಾವು ಶಿಕ್ಷಕರ ಜತೆ ಮಾತನಾಡಿ ಅವರ ಸಲಹೆಗಳ ಮೇಲೆ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಲಿದ್ದೆವೆ, ಒಟ್ಟಿನಲ್ಲಿ ಕಡಬ ತಾಲೂಕಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ಬಗ್ಗೆ ಪ್ರಯತ್ನ ಮಾಡಲಾಗುವುದು, ಮುಂದೆ ತಾಲೂಕಿನ ಪ್ರತಿ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

Also Read  ಸುಳ್ಯ: ಬಿಜೆಪಿ ಮಂಡಲದ ಯುವ ಮೋರ್ಚಾ ನೂತನ ಪದಾಧಿಕಾರಿಗಳ ಆಯ್ಕೆ

error: Content is protected !!
Scroll to Top