ಕಡಬ: ದಂಪತಿಯ ಮೇಲೆ ದಾಳಿ‌ ಮಾಡಿ ಮರದ ಮೇಲೇರಿದ ಚಿರತೆ ? ಚಿರತೆಯ ಬಂಧನಕ್ಕೆ ಕಾರ್ಯಾಚರಣೆ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ದಂಪತಿಗೆ ದಾಳಿ ಮಾಡಿದ ಚಿರತೆಯು ಮರದ ಮೇಲೆ ಏರಿ ಕುಳಿತಿದ್ದು, ಚಿರತೆಯ ಬಂಧನಕ್ಕೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ‌.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ್ ಕಾಮತ್ ಹಾಗೂ ಸೌಮ್ಯ ಕಾಮತ್ ಎಂಬವರು ಶುಕ್ರವಾರ ಬೆಳಗಿನ ಜಾವ ತೋಟಕ್ಕೆ ಪೈಪ್ ಜೆಟ್ ಬದಲಾಯಿಸಲೆಂದು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು ತಕ್ಷಣವೇ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಪಿಲಿಕುಲದ ನುರಿತ ಶೂಟರ್ ಡಾ| ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ.ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿಗಳು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

Also Read  ಸುವರ್ಣ ಸಂಭ್ರಮ: ಪ್ರದರ್ಶನ ಸ್ಟಾಲ್ ತೆರೆಯಲು ಅರ್ಜಿ ಆಹ್ವಾನ

error: Content is protected !!