ನೆಲ್ಯಾಡಿ: ಹೆದ್ದಾರಿಯಲ್ಲಿ ಹೊತ್ತಿ ಉರಿದ ಪ್ಯಾಸೆಂಜರ್ ವಾಹನ ➤ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಶಾರ್ಟ್ ಸರ್ಕ್ಯೂಟ್ ಗೆ ಒಳಗಾಗಿ ಪ್ಯಾಸೆಂಜರ್ ವಾಹನವೊಂದು ಹೊತ್ತಿ ಉರಿದ‌ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಣ್ಣಗುಂಡಿ ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ.

ವಾಹನದಲ್ಲಿ ಮೂವರು ಸಂಚರಿಸುತ್ತಿದ್ದ ವೇಳೆ ಮಣ್ಣಗುಂಡಿ ಬಳಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದರಾದರೂ ಅದಾಗಲೇ ಬೆಂಕಿಯ ಜ್ವಾಲೆ ಹೆಚ್ಚಾಗಿ ವಾಹನವು ಹಠಾತ್ತನೆ ರಸ್ತೆಯ ಮಧ್ಯ ಭಾಗಕ್ಕೆ ಬಂದು ನಿಂತಿದೆ. ಘಟನೆಯಲ್ಲಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು, ನೆಲ್ಯಾಡಿ ಪೊಲೀಸ್ ಹೊರಠಾಣೆಯಲ್ಲಿ ಇರಿಸಲಾಗಿದೆ.

Also Read  ಮಂಗಳೂರು: ಫೈಬರ್‌ ಶೀಟ್‌ ಬದಲಿಸುವ ವೇಳೆ ಬಿದ್ದು ಕಾರ್ಮಿಕ ಮೃತ್ಯು

error: Content is protected !!
Scroll to Top